ಆಹಾರ ಧಾನ್ಯಗಳ ಕಿಟ್ ವಿತರಣೆ

ಮುನವಳ್ಳಿ.ಜೂ10: ಪಟ್ಟಣದ ಪಂಚಲಿಂಗೇಶ್ವರ ದೇವಸ್ಥಾನದ ಸಬಾಭವನದಲ್ಲಿ ಕೊರೊನಾ ಸಂದಿಗ್ದ ಸಂದರ್ಭದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ವಿಧಿಸಿದ ಲಾಕ್‍ಡೌನ ಹಿನ್ನೆಲೆಯಲ್ಲಿ ಅಲೆಮಾರಿ ಹಾಗೂ ಅರ್ಚಕರಿಗೆ, ಹಿಂದೂಳಿದ ವರ್ಗಗಳಿಗೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಉಳಿಕೆ ಆಗಿರುವ ಆಹಾರ ದಾನ್ಯಗಳ ಕಿಟ್‍ಗಳನ್ನು ಉಭಸಭಾಪತಿಗಳಾದ ಆನಂದ ಮಾಮನಿಯವರು ಮುರುಘೇಂದ್ರ ಶ್ರೀಗಳ ಸಾನಿಧ್ಯದಲ್ಲಿ ವಿತರಿಸಿದರು.
ನಂತರ ಮಾತನಾಡಿದ ಅವರು ಆರೋಗ್ಯ ದೃಷ್ಟಿಯಿಂದ ಪ್ರತಿಯೊಬ್ಬರು ಸರಕಾರ ಕೊಡುವ ಉಚಿತ ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಸಾರ್ವಜನಿಕರು ಅಂಜುವ ಅವಶ್ಯಕತೆಯಿಲ್ಲಾ. ಲಸಿಕೆಗಳು ಸಾಕಷ್ಟು ಲಭ್ಯವಿರುತ್ತದೆ. ಅಲ್ಲದೆ ಕೇಂದ್ರ ಸರಕಾರ ನವೆಂಬರವರೆಗೆ ಉಚಿತವಾಗಿ ನೀಡುತ್ತಿರುವ ಪಡಿತರ ಉಪಯೋಗ ಪಡೆದುಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ದಂಡಾಧಿಕಾರಿ ಪ್ರಶಾಂತ ಪಾಟೀಲ, ಗ್ರೇಡ್ 2 ದಂಡಾಧಿಕಾರಿ ಗುಂಡಪ್ಪಗೋಳ,ತಾ.ಪಂ. ಇ. ಓ.ಯಶವಂತಕುಮಾರ, ಎಚ.ಕೆ.ಕದ್ರಾಪೂರ, ಸಿ.ಪಿ.ಐ ಮಂಜುನಾಥ ನಡುವಿನಮನಿ, ಮುಖ್ಯಾಧಿಕಾರಿ ಎಮ್.ಎಮ್.ತಿಮ್ಮಾಣಿ, ಪುರಸಭೆ ಅಧ್ಯಕ್ಷ ವಿಜಯ ಅಮಠೆ, ರಮೇಶ ಗೋಮಾಡಿ, ನಿಂಗನಗೌಡ ಮಲಗೌಡರ, ದುಂಡಪ್ಪ ಬುರ್ಜಿ ಇತರರು ಉಪಸ್ಥಿತರಿದ್ದರು.