ಆಹಾರ ಚಲ್ಲಬೇಡಿ ಅಭಿಯಾನಕ್ಕೆ ಗಂಗಾವತಿ ಪ್ರಾಣೇಶ ಚಾಲನೆ


ಸಂಜೆವಾಣಿ ವಾರ್ತೆ
ಗಂಗಾವತಿ, ಮಾ.02: ಆಹಾರ ಚಲ್ಲಬೇಡಿ ಎಷ್ಟೋ ಜನಕ್ಕೆ ಆಹಾರದ ಕೊರತೆ ಕಾಡುತ್ತಿದೆ ನೀಡಿಸಿಕೊಳ್ಳುವಾಗಲೆ ಕಡಿಮೆ ನೀಡಿಸಿ ಕೊಳ್ಳಿ ಆಹಾರದ ಕುರಿತು ಅಸಡ್ಯೆ ಹಾಸ್ಯ ಬೇಡ. ಆಹಾರ ಚಲ್ಲುವುದು ಸರಳ ಬೆಳೆಯುದು ಕಷ್ಠ, ಹಿತ ಮಿತವಾಗಿ ಬಳಸಿದರೆ ಒಳಿತು ಎಂದು ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ ಅಭಿಪ್ರಾಯ ಪಟ್ಟರು.
ಗಂಗಾವತಿ ಆರಾಧ್ಯ ದೈವ ಚನ್ನಬಸವ ತಾತನ ಕಲ್ಯಾಣ ಮಂಟಪದ ಆವರಣದಲ್ಲಿ ಮಾ.01ರಂದು ಬುಧವಾರ ನಡೆದ ಆಹಾರ ಚಲ್ಲಬೇಡಿ ಅಭಿಯಾನದಲ್ಲಿ ಪೋಸ್ಟರ್ ಬಿಡುಗಡೆ ಮಾಡಿ ಕಲ್ಯಾಣ ಮಂಟಪದ ಗೋಡೆಗೆ ಹಚ್ಚಿ ಅವರು ಮಾತನಾಡುತ್ತಾ, ಯಾರು ತಟೆಯಲ್ಲಿನ ಆಹಾರವನ್ನು ಉಳಿಸದೆ ಸಂಪೂರ್ಣ ಸೇವಿಸುತ್ತಾರೋ ಅಂಥವರು ಆರೋಗ್ಯವಾಗಿರುತ್ತಾರೆ. ಗರುಡ ಪುರಾಣದಲ್ಲಿ ಒಂದು ಮಾತಿದೆ ಯಾರು ಅನ್ನವನ್ನು ಚಲ್ಲುತ್ತಾರೋ ಮುಂದೆ ಅದನ್ನೇ ತಿನ್ನುವ ಜೀವಿಗಳಾಗಿ ಹುಟ್ಟುತ್ತಾರೆ ಆಹಾರವನ್ನು ಯಾರೂ ಚಲ್ಲಬಾರದು ಎಂದು ಜಾಗೃತಿ ಮೂಡಿದರು.
ಈ ವೇಳೆ ಅಭಿಯಾನದ ರೂವಾರಿ ದಂತವೈದ್ಯ ಡಾ.ಶಿವಕುಮಾರ ಮಾಲಿಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಈ ಅಭಿಯಾನಕ್ಕೆ ಸಾಕಷ್ಟು ಜನ ಬ್ಯಾನರ್ ಮಾಡಿಸಲು ಹಣ ಸಂದಾಯ ಮಾಡಿದ್ದಾರೆ ಅವರಿಗೆ ಧನ್ಯವಾದ ಅರ್ಪಿಸುವೆ. ಆಹಾರ ಚೆಲ್ಲಲು ನಿಮಿಷ ಸಾಕು ಆದರೆ ಬೆಳೆಯಲು ತಿಂಗಳಾನುಗಟ್ಟಲೇ ಕಾಯಬೇಕಾಗುತ್ತದೆ ಸರ್ವರೂ ಈ ಅಭಿಯಾನದಲ್ಲಿ ಭಾಗಿಯಾಗಿ ಮದುವೆ ಅಥವಾ ಇನ್ನಾವುದೇ ಕಾರ್ಯಕ್ರಮದಲ್ಲಿ ಕಡಿಮೆ ನೀಡಿಸಿಕೊಂಡು ಸಂಪೂರ್ಣ ಆಹಾರ ಸೇವಿಸಬೇಕು ಎಂದರು.
ಈ ವೇಳೆ ಚನ್ನಬಸಯ್ಯಸ್ವಾಮಿ, ಸಿ.ಬಿ.ಎಸ್ ಕಲ್ಯಾಣ ಮಂಟಪದ ಮುಖ್ಯಸ್ಥ ರುದ್ರಪ್ಪ ಗಾಳಿ, ಪ್ರದೀಪ, ರಮೇಶ ಗಬ್ಬೂರ, ಆನಂದ ಅಕ್ಕಿ, ಹರನಾಯಕ, ಪ್ರಹ್ಲಾದ ಕುಲಕರ್ಣಿ, ನೀಲಕಂಠಪ್ಪ ನಾಗಶೆಟ್ಟಿ, ಮೈಲಾರಪ್ಪ ಬೂದಿಹಾಳ ಅಶೋಕ ಗುಡಿಕೋಟಿ, ಗುರುರಾಜ, ಮಂಜುನಾಥ ಸೇರಿದಂತೆ ಚಾರಣಬಳಗದ ಸದಸ್ಯರು ಹಾಗೂ ಇತರರು ಇದ್ದರು.