ಆಹಾರ ಕಿಟ್ ವಿತರಣೆ

ಲಕ್ಷ್ಮೇಶ್ವರ,ಮೇ5: ಸಂಕಷ್ಟದ ಸಮಯದಲ್ಲಿ ಪ್ರಜಾಪ್ರತಿನಿಧಿಗಳು ಜನರ ನೆರವಿಗೆ ಸ್ವಯಂಪ್ರೇರಣೆಯಿಂದ ಮುಂದಾಗಬೇಕು ಇದು ಮಾನವೀಯತೆಯ ಗುಣವೂ ಹೌದು ಆದರೆ ಆಯ್ಕೆಯಾಗಿರುವ ಪ್ರತಿನಿಧಿಗಳು ಜನರ ಕಷ್ಟಕಾರ್ಪಣ್ಯಗಳಿಗೆ ನೆರವಾಗುವುದು ಅವರ ವರ್ಚಸ್ಸಿಗೆ ಮತ್ತಷ್ಟು ಬಲ ನೀಡುತ್ತದೆ.
ಈ ನಿಟ್ಟಿನಲ್ಲಿ ಪುರಸಭೆಯ 21 ನೇ ವಾರ್ಡಿನ ಸದಸ್ಯರಾದ ಫಿರ್ದೋಷ ಆಡೂರ ಅವರು ಕಳೆದ ವರ್ಷದಂತೆ ಲಾಕ್ ಡೌನ್ ಸಂದರ್ಭದಲ್ಲಿ ಈ ವರ್ಷವೂ ತಮ್ಮ ವಾರ್ಡಿನ ಜನರಿಗೆ ರಂಜಾನ್ ಹಬ್ಬದ ನಿಮಿತ್ಯವಾಗಿ ಆಹಾರದ ಕಿಟ್ ಗಳನ್ನು ವಿತರಿಸುವ ಮೂಲಕ ವಿಶೇಷತೆಯನ್ನು ತೋರಿದ್ದಾರೆ.
ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ ರಾಮಕೃಷ್ಣ ದೊಡ್ಡಮನಿ ಅವರು 21 ವಾರ್ಡಿನಲ್ಲಿ ಕಿಟ್ ವಿತರಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಆರ್.ಕೊಪ್ಪದ, ನಗರ ಘಟಕದ ಅಧ್ಯಕ್ಷ ಸರಫರಾಜ್ ಸೂರಣಗಿ, ಪುರಸಭೆ ಉಪಾಧ್ಯಕ್ಷ ರಾಮು ಗಡದವರ, ಸದಸ್ಯರಾದ ಜಯಕ್ಕ ಕಳ್ಳಿ, ಸಾಹೀಬ್ ಜಾನ್ ಹವಾಲ್ದಾರ್, ಭಾಗ್ಯಶ್ರೀ ಎಲ್, ಎಂ.ಎಸ್. ದೊಡ್ಡಗೌಡ್ರ, ಚೆನ್ನಪ್ಪ ಜಗಲಿ, ನೀಲಪ್ಪ ಶೆರಸೂರಿ, ಫಕಿರೇಶ್ ಮ್ಯಾಟಣ್ಣವರ ಸೇರಿದಂತೆ ಅನೇಕರು ಇದ್ದರು.