ಆಹಾರ ಕಿಟ್ ವಿತರಣೆ


ಬೆಳಗಾವಿ,ಮೇ.21: ವೈದ್ಯೆ ಡಾ. ಸೋನಾಲಿ ಸರ್ನೋಬತ್ ಅವರ ನಿಯತಿ ಫೌಂಡೇಶನ್ ವತಿಯಿಂದ ವಿಶೇಷಚೇತನರಿಗೆ ಆಹಾರ ಕಿಟ್ ವಿತರಣೆ ಮಾಡಲಾಯಿತು.
ಲಾಕ್ ಡೌನ್ ಹಿನ್ನೆಲೆಯಲ್ಲಿ ಕೆಲ ಶ್ರಮಿಕ ಜನರು ಒಂದು ಹೊತ್ತು ಊಟ ಇಲ್ಲದೆಯೂ ಪರದಾಡುತ್ತಿದ್ದಾರೆ.ಪರದಾಡುತ್ತಿದೆ. ನಿಯತಿ ಫೌಂಡೇಶನ್ ಈ ಹಿಂದೆಯೂ ಖಾನಾಪೂರ ಸೇರಿದಂತೆ ಜಿಲ್ಲೆಯ ನಾನಾ ಭಾಗಗಳಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದು, ಅದೇ ರೀತಿ ಬೆಳಗಾವಿ ನಗರದಲ್ಲಿ ಇರುವ ವಿಶೇಷ ಚೇತನರಿಗೆ ಆಹರ ಕಿಟ್ ಹಂಚಿದ್ದಾರೆ.
ಈ ಪ್ರದೇಶದಲ್ಲಿ ಸ್ವತಃ ನೈರ್ಮಲ್ಯ ಹಾಗೂ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲ . ಈ ನಿಟ್ಟಿನಲ್ಲಿ ಅಲ್ಲಿಗೆ ತೆರಳಿ ತೆರಳಿದ ಸೋನಾಲಿ ಸರ್ನೋಬತ್ ಹಾಗೂ ಭಾಗ್ಯಶ್ರೀ ಕೋಕಿಷ್ಕರ ಮುಂತಾದವರು ನಾಗರಿಕರಿಗೆ ಅನುಕೂಲವಾಗುವ ನಿಟ್ಟಿಯಲ್ಲಿ ಅಗತ್ಯ ವಸ್ತುಗಳ ಕಿಟ್ ವಿತರಿಸಿದರು . ಕೋವಿಡ್ ಮಹಾಮಾರಿ ಹರಡಿರುವ ಈ ಸಂದರ್ಭದಲ್ಲಿ ಅಗತ್ಯ ಆರೋಗ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆಯೂ ಸೋನಾಲಿ ಸರ್ನೋಬತ್ ಅವರು ಜನತೆಗೆ ಸಲಹೆ ನೀಡಿದರು.