ಆಹಾರ ಕಿಟ್ ವಿತರಣೆ

ಲಕ್ಷ್ಮೇಶ್ವರ,ಮೇ16: ಕೊರೊನಾದ ಎರಡನೇ ಅಲೆಯು ಎಲ್ಲಿಲ್ಲದ ಸಂಕಷ್ಟವನ್ನು ತಂದಿದ್ದು ಪ್ರತಿಯೊಬ್ಬರು ಸಂಕಷ್ಟದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ.
ಈ ಸುಳಿಯಲ್ಲಿ ವಲಸೆ ಬಂದಿರುವ ಹರಣಿ ಶಿಕಾರಿಗಳ ತಂಡ ಲಕ್ಷ್ಮೇಶ್ವರ ಹುಬ್ಬಳ್ಳಿ ರಸ್ತೆಯಲ್ಲಿ ಬಿಡಾರ ಹೂಡಿದ್ದ ಅವರು ಕಳೆದ ಒಂದು ವಾರದಿಂದ ಲಾಕ್‍ಡೌನ್ ಹಿನ್ನೆಲೆಯಲ್ಲಿ ಅವರ ಗಿಡಮೂಲಿಕೆ ಔಷಧ ವ್ಯಾಪಾರ ಸಂಪೂರ್ಣ ಸ್ಥಗಿತಗೊಂಡು ಆಹಾರಕ್ಕಾಗಿ ಪರಿತಪಿಸುತ್ತಿದ್ದರು.
ಇದನ್ನು ಮನಗಂಡ ಲಕ್ಷ್ಮೇಶ್ವರ ಠಾಣೆ ಪಿ.ಎಸ್.ಐ. ಶಿವಯೋಗಿ ಲೋಹಾರ್ ಅವರು ಬಡ ಕುಟುಂಬಗಳಿಗೆ ಆಹಾರದ ಕಿಟ್ ಮತ್ತು ತರಕಾರಿಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದು ಸಾರ್ವಜನಿಕ ಪ್ರಶಂಸೆಗೆ ಪಾತ್ರರಾಗಿದ್ದಾರ.