ಆಹಾರ ಕಿಟ್ ವಿತರಣೆ

ಕುಕನೂರು ಜೂ 15 :ಪಟ್ಟಣದ ಕಿಲ್ಲೆದೋಣಿ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಧರ್ಮಸ್ಥಳ ಪಾದಯಾತ್ರಾ ಸಮಿತಿಯಿಂದ ಬಡ ನಿರ್ಗತಿಕ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಯಿತು ಈ ಸಂದರ್ಭದಲ್ಲಿ ಪಿಎಸ್ ಐ ಎನ್ ವೆಂಕಟೇಶ್ ಅವರು ಮಾತನಾಡಿ ,ಕುಕನೂರು ಪಟ್ಟಣ ಐತಿಹಾಸಿಕ ಸ್ಥಳವಾಗಿದ್ದು ಇಲ್ಲಿಯ ಜನರ ಭಾವನೆ ನಿರಂತರ ದಾನ ಧರ್ಮ ಪರೋಪಕಾರದಂಥ ಕಾರ್ಯಗಳು ಸತತವಾಗಿ ನಡೆಯುತ್ತಿರುತ್ತವೆ , ಪಟ್ಟಣದ ಧರ್ಮಸ್ಥಳ ಮಂಜುನಾಥ ಭಕ್ತಾದಿಗಳು ಪಾದಯಾತ್ರೆ ಜೊತೆಜೊತೆಗೆ ಕರೋನಾದಂತ ಸಂಕಷ್ಟದಲ್ಲಿ ಸಂದರ್ಭದಲ್ಲಿ ಬಡ ನಿರ್ಗತಿಕರಿಗೆ ಆಹಾರ ಕಿಟ್ ವಿತರಿಸಿ ಮಾನವೀಯತೆ ಮೆರೆಯುತ್ತಿರುವುದು ಎಲ್ಲರಿಗೂ ಮಾದರಿ ಎಂದರು ಈ ಸಂದರ್ಭದಲ್ಲಿ ವಕೀಲರಾದ ಬಸವರಾಜ ಜಗ್ಲಿ
ಮಲ್ಲಿಕಾಜು೯ನ ಚೋದರಿ.ಬಸವರಾಜ ದಿವಟರ . ಪಟ್ಟಣಶೆಟ್ಟಿ .ಉಮೇಶಪ್ಪ ನವಲಗುಂದ.ಕಳಕಪ್ಪ ಬೋರಣ್ಣವರ್.ನಾರಯಣಪ್ಪ ನಾಯಕ್.ಪತ್ರಕರ್ತ ಮುರಾರಿ ಭಜಂತ್ರಿ, ಬಾಲಪ್ಪ ಓಲಿ.ಪಾಂಡುರಂಗ ಪೂಜಾರ .ಗವಿಸಿದ್ದಪ್ಪ ಪೂಜಾರ ಇತರರು ಉಪಸ್ಥಿತರಿದ್ದರು