ಆಹಾರ ಕಿಟ್ ವಿತರಣೆ

ಹುಬ್ಬಳ್ಳಿ,ಜೂ11: ನಗರದ ಮಹಾವೀರ ಯೂಥ್ ಫೆಡರೇಶನ್ ಆಶ್ರಯದಲ್ಲಿ ಇಲ್ಲಿನ ಹಳೆಹುಬ್ಬಳ್ಳಿಯಲ್ಲಿರುವ ಎ. ಜೆ. ಮುಧೋಳ್ ಭವನದಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಸ್ಯಾನಿಟೈಸರ್, ಮಾಸ್ಕ್ ಹಾಗೂ ಆಹಾರ ಕಿಟ್ ನ್ನು ಸಂಘಟನೆಯ ಅಧ್ಯಕ್ಷ ಆನಂದ್ ಪಟ್ವಾ ಹಾಗೂ ಸುರೇಶ ಜೀರ್ವಾಲ್ ವಿತರಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಾರ್ಮಿಕ ನಾಯಕರಾದ ಬಾಬಾಜಾನ್ ಮುಧೋಳ್ ಸಾಮಾಜಿಕ ಹೋರಾಟಗಾರ ರಾಜಶೇಖರ್ ಮೆಣಸಿನಕಾಯಿ, ಸಂಘಟನೆಯ ಮುಖ್ಯಸ್ಥರಾದ ಕಸ್ತೂರಿ ಬೇಂದ್ರೆ, ರೇಖಾ ಮಿರಜಕರ್, ಶಹನಾಜ್ ಬೇಗಂ ಅಮರಗೋಳ್ ಆಗಮಿಸಿದ್ದರು, ನಂತರ ಮಾತನಾಡಿದ ಮುಖಂಡರುಗಳು ಕೊರೊನಾ ಸಂದಿಗ್ದ ಪರಸ್ಥಿತಿಯಲ್ಲಿ ದುಡಿಯುವ ವರ್ಗಕ್ಕೆ ಕಿಟ್ಟನ್ನು ವಿತರಿಸುತ್ತಿರುವ ಜೈನ ಧರ್ಮದ ಕಾರ್ಯಶ್ಲ್ಯಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಹಾವೀರ್ ಯೂಥ್ ಫೆಡರೇಶನ್ ಪದಾಧಿಕಾರಿಗಳಾದ ಮುಕೇಶ್ ಭಂಡಾರಿ, ಅಭಯ್ ಭೇತಾಳ, ಸುರೇಶ ಚಚೆಡ , ನಿತೇಶ್ ಜೈನ, ಸುರೇಶ ಜೈನ, ಸೇರಿದಂತೆ ಇನ್ನಿತರ ಸಂಘಟನೆಯ ಮುಖಂಡರುಗಳಾದ ಬಿ. ಎ. ಮುಧೋಳ್, ಎ. ಎಸ್. ಪೀರ್ಜಾದೆ, ಮುಂತಾದವರು ಉಪಸ್ಥಿತರಿದ್ದರು.