ಆಹಾರ ಕಿಟ್ ವಿತರಣೆ

ಕಿತ್ತೂರ, ಜೂ 7: ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ತುರಮರಿ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಕೊರೊನಾ ಮಹಾಮಾರಿ ಸಂಕಷ್ಟದಲ್ಲಿದ್ದ ತುರಮರಿ ಹಾಗೂ ಕೋಟಬಾಗಿ ಬಡವರಿಗೆ, ಅಂಗವಿಕಲರಿಗೆ, ವೃದ್ಧರಿಗೆ ಆಹಾರಕ್ಕೆ ಕಿಟ್ ವಿತಸಲಾಯಿತು.
ಈ ಸಂದರ್ಭದಲ್ಲಿ ತುರುಮರಿ ಶಾಲಾ ಆವರಣದಲ್ಲಿ ಮರವನ್ನು ನೆಡುವ ಮುಖಾಂತರ ಜನರಿಗೆ ಕೊರೊನಾ ನಿಯಮ ಪಾಲಿಸುವಂತೆ ಹಾಗೂ ಪರಿಸರ ಬಗ್ಗೆ ತಿಳುವಳಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ನಿರ್ದೇಶಕರಾದ ಪ್ರದೀಪ, ಯೋಜನಾಧಿಕಾರಿ ಪ್ರಶಾಂತ್ ನಾಯಕ್, ಒಕ್ಕೂಟ ಅಧ್ಯಕ್ಷರಾದ ಸುನಂದ ವಿ. ಸೀಗೆಹಳ್ಳಿ, ಶಾಲಾ ಕಮೀಟಿಯ ಸದಸ್ಯರಾದ ಪಾರ್ವತಿ ಹಾರೋಗೊಪ್ಪ, ರೇಣುಕಾ, ಆಶಾ ಕಾರ್ಯಕರ್ತರಾದ ಬಸಮ್ಮ, ಗಂಗವ್ವ ಸೀಗೆಹಳ್ಳಿ, ಬಸಮ್ಮ ಹುಬ್ಬಳ್ಳಿ, ದಿವ್ಯಾ ನಾಯಕ್, ರೇಣುಕಾ ಸೊಗಲದ ಉಪಸ್ಥಿತರಿದ್ದರು.