ಆಹಾರ ಕಿಟ್ ವಿತರಣೆ

ಬಂಕಾಪುರ, ಜೂ4 ; ಬಂಕಾಪುರ ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ಅವರು ಆಹಾರ ಧಾನ್ಯ ಕಿಟ್‍ಗಳನ್ನು ಬಡವರಿಗೆ ವಿತರಿಸಿದರು. ನಂತರ ಮಾತನಾಡಿದ ಅವರು, ಕೂಲಿಕಾರ್ಮಿಕರು ಲಾಕ್‍ಡೌನ್‍ದಿಂದ ಸಂಕಷ್ಟಕ್ಕೆ ಸಿಲುಕಿದ್ದು, ಖಾಸಗಿ ಕಂಪನಿಗಳು, ವಿವಿಧ ಸಂಘ ಸಂಸ್ಥೆಗಳು ಉಚಿತವಾಗಿ ಆಹಾರ ಧಾನ್ಯಗಳ ಕಿಟ್‍ಗಳನ್ನು ನೀಡಿವೆ. ಅವುಗಳನ್ನು ಅರ್ಹರಿಗೆ ಗುರುತಿಸಿ ತಲುಪಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಲಾಗಿತ್ತು ಎಂದರು. ಪುರಸಭೆಯ ಆರೋಗ್ಯ ಅಧಿಕಾರಿ ರೂಪಾ ನಾಯಕ್, ನಿಂಗಪ್ಪಾ ಹೊಸಮನಿ ವೀರಣ್ಣಾ ಬಾರ್ಕೀ, ಜಗದೀಶ ದೊಡ್ಡಗೌಡ್ರ ಮುಂತಾದವರು ಇದ್ದರು.