ಆಹಾರ ಕಿಟ್ ವಿತರಣೆ

ಮುನವಳ್ಳಿ,ಜೂ1: ಪಟ್ಟಣದ ಅಭಿ ಆಸ್ಪತ್ರೆಯಲ್ಲಿ ಸೋಮಶೇಖರ ಮಠದ ಶ್ರೀ ಮುರುಘೇಂದ್ರ ಶ್ರೀಗಳ ಸಾನಿದ್ಯದಲ್ಲಿ ದಿ. ಎಮ್ ಎಮ್ ಹನಸಿ ಗುರುಗಳ 71ನೇ ಹುಟ್ಟುಹಬ್ಬÀ ನಿಮಿತ್ಯವಾಗಿ ಅವರ ಸುಪುತ್ರರಾದ ಡಾ.ರವಿ ಹನಸಿ, ಮಲ್ಲಣ್ಣ ಹನಸಿ ಕುಟುಂಬದವರಿಂದ ಅಭಿ ಆಸ್ಪತ್ರೆ ರೋಗಿಗಳಿಗೆ ಉಚಿತ ಮಾಸ್ಕ್, ಆಹಾರ ಕಿಟ್, ದಿನಸಿ, ಹಾಗೂ ಹಣ್ಣು ಹಂಪಲ ವಿತರಣೆ ಮಾಡಿದರು.
ಪಟ್ಟಣದ ಎಲ್ಲ ಆಸ್ಪತ್ರೆ ಗಳಿಗೆ, ಕೆಇಬಿ ಸಿಬ್ಬಂದಿ, ಪೋಲೀಸ ಸಿಬ್ಬಂದಿ, ಹಾಗೂ ಪುರಸಭೆಯ ಎಲ್ಲ ಸಿಬ್ಬಂದಿ ಗಳಿಗೆ ಉಚಿತವಾಗಿ 200 ಆಹಾರ ಕಿಟ್ ಗಳನ್ನು ವಿತರಿಸಿದರು.
ಪಂಚನಗೌಡ ದ್ಯಾಮನಗೌಡ್ರ, ಡಾ|| ಬಸಿರಹ್ಮದ ಭೈರಕದಾರ, ಪುರಸಭೆ ಅಧ್ಯಕ್ಷ ವಿಜಯ ಅಮಠೆ, ಮೋಹನ ಕಾಮನ್ನವರ, ಶಿವಯ್ಯ ಹಿರೇಮಠ, ಶ್ರೀಶೈಲ್ ಬಿಜಗುಪ್ಪಿ, ಮಲ್ಲಿಕಾರ್ಜುನ ಕಮತಗಿ, ಪರಶುರಾಮ ಘಂಟಿ, ಅಮಿತ ಕರಿಕಟ್ಟಿ, ಭವಾನಿ ಕೊಂದುನಾಯ್ಕ, ಮಲ್ಲಿಕಾರ್ಜುನ ಮುಗಳಿ, ಸಂಜೀವ ಕಾಮನ್ನವರ, ಉಮೇಶ ಚುಳಕಿ, ವಿನಾಯಕ ರೇವಡಗಿ, ಶೀವು ಜಿಡ್ಡಿಮನಿ, ಬಾಳು ಹೊಸಮನಿ, ರುದ್ರಗೌಡ ಕಳಸನಗೌಡ್ರ, ಧೀಪಕ ಕಮ್ಮಾರ ಕಲಾ ಬಳಗ ಹಾಗೂ ಸ್ನೇಹ ಜೀವಿ ಬಳಗದ ಸದಸ್ಯರು ಉಪಸ್ಥಿತರಿದ್ದರು.