ಆಹಾರ ಕಿಟ್ ವಿತರಣೆ


ಲಕ್ಷ್ಮೇಶ್ವರ, ಮೇ31: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ದ್ವಿತೀಯ ಅವಧಿಯಲ್ಲಿ 2 ವರ್ಷಗಳನ್ನು ಹಾಗೂ ಒಟ್ಟು 7 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದು ಶಿರಹಟ್ಟಿ ಮತಕ್ಷೇತ್ರ ಶಾಸಕರಾದ ರಾಮಣ್ಣ ಲಮಾಣಿಯವರು ಲಕ್ಷ್ಮೇಶ್ವರದ ಸರ್ಕಾರಿ ಆಸ್ಪತ್ರೆ ಹಾಗೂ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಿರ್ಮಿಸಿದ 100 ಬೆಡ್’ಗಳ ಕೋವಿಡ್ ಕೇರ್ ಕೇಂದ್ರಕ್ಕೆ ಪ್ರಗತಿ ಪರಿಶೀಲನೆಗಾಗಿ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಕೋವಿಡ್ – 19 ಸೋಂಕಿತರಿಗೆ, ಚಿಕಿತ್ಸೆ ಪಡೆಯುತ್ತಿರುವವರಿಗೆ ಮಾನಸಿಕ ಧೈರ್ಯ ತುಂಬಿದರು. ಮಾಸ್ಕ್, ಸ್ಯಾನಿಟೈಸರ್, ಸಿರಿಧಾನ್ಯಗಳ ಪೌಷ್ಟಿಕ ಆಹಾರದ ಪ್ಯಾಕೆಟ್’ಗಳು ಹಾಗೂ ಅತಿ ಅವಶ್ಯವಿರುವವರಿಗೆ ಹ್ಯಾಂಡ್ ಗ್ಲೌಸ್ ಮತ್ತು ಪಿಪಿಇ ಕಿಟ್‍ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಚಂಬಣ್ಣ ಬಾಳಿಕಾಯಿ, ನೀಲಪ್ಪ ಕರ್ಜಕಣ್ಣವರ, ಷಣ್ಮುಖ ಗೋಡಿ, ಶಿವಯೋಗಿ ಅಂಕಲಕೋಟಿ, ನಿಂಗಪ್ಪ ಬನ್ನಿ, ಶಿರಹಟ್ಟಿ ಪೆÇೀಲಿಸ್ ವೃತ್ತ ನಿರೀಕ್ಷಕರಾದ ವಿಕಾಸ್ ಲಮಾಣಿ, ಲಕ್ಷ್ಮೇಶ್ವರ ಪಿ.ಎಸ್.ಐ. ಶಿವಯೋಗಿ ಲೋಹಾರ, ಪುರಸಭೆಯ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ, ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್ಲ, ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.