ಆಹಾರ ಕಿಟ್ ವಿತರಣೆ

ಧಾರವಾಡ,ಮೇ28: ಎವೊಲ್ವ್ ಲೈವ್ಸ್ ಫೌಂಡೇಶನ್ ನಗರದ ಕಲಾಭವನದಲ್ಲಿ ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟ ಧಾರವಾಡ ಜಿಲ್ಲಾ ಘಟಕದ 50 ಜನ ಸದಸ್ಯರಿಗೆ ಶುಕ್ರವಾರ ಆಹಾರದ ಕಿಟ್ ವಿತರಿಸಲಾಯಿತು.
ಕಿಟ್ ವಿತರಿಸಿಮಾತನಾಡಿದ ಓಟಲಿ ಅನ್ಬನ್ ಕುಮಾರ್, ಕೊರೋನಾ ಲಾಕ್‍ಡೌನ್‍ನಿಂದ ಸಾಕಷ್ಟು ಸಮುದಾಯದ ಜನರು ತತ್ತರಿಸಿದ್ದಾರೆ. ಇವರಿಗೆ ಸರ್ಕಾರ ಸಹಾಯ ಹಸ್ತ ಚಾಚಬೇಕು ಎಂದರು.
ನಮ್ಮ ಸಂಸ್ಥೆ ದಿವ್ಯಾಂಗರ ಜೊತೆಗಿದೆ. ಶಿಕ್ಷಣಕ್ಕೆ ಆರ್ಥಿಕ ಸಹಾಯ, ಉದ್ಯೋಗ ನೀಡುವ ಕೆಲಸ ಮಾಡಿದೆ. ಸೌಲಭ್ಯಗಳ ಸದ್ಬಳಕೆಯಿಂದ ಸಮಾಜದ ಮುಖ್ಯವಾಹಿನಿಗೆ ಬರಲು ಹೇಳಿದರು
ಆರ್ಥಿಕ ಸಂಕಷ್ಟದಲ್ಲಿ ಇರುವ ವಿಕಲಚೇತನರ ಸಂಕಷ್ಟಕ್ಕೆ ಮಿಡಿಯಲು ಆಹಾರದ ಕಿಟ್ ವಿತರಿಸಿದೆ. ಅನೇಕ ಸಂಘ-ಸಂಸ್ಥೆಗಳು ಈ ಸಮುದಾಯದ ಜತೆಗೆ ನಿಲ್ಲಬೇಕೆಂದು ಕರೆ ನೀಡಿದರು.
ದಿವ್ಯಾಂಗರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಮಾಸ್ಕ್ ಧಾರಣೆ, ಅಂತರ ಪಾಲನೆ, ಸ್ಯಾನಿಟೈಜರ್ ಬಳಕೆ ಜತೆ ಅನಗತ್ಯ ಸಂಚರಿಸಿದ, ಮನೆಯಲ್ಲಿ ಸುರಕ್ಷಿತ ಇರಲು ಕಿವಿಮಾತು ಹೇಳಿದರು.
ಜಿಲ್ಲಾಧ್ಯಕ್ಷ ಕೇಶವ ತೆಲಗು, ಓಟಲಿ ಅನ್ಬನ್ ಕುಮಾರ್ ಅವರು ದಿವ್ಯಾಂಗ ಸಮುದಾಯದ ಜತೆಗೆ ನಿಂತಿದ್ದಕ್ಕೆ ಕೃತಜ್ಞೆಗಳು. ಅವರ ಸಹಕಾರ ಮತ್ತಷ್ಟು ಕೆಲಸ ಮಾಡುವ ಹುಮ್ಮಸ್ಸು ಬಂದಿದೆ ಎಂದರು.
ಲಾಕ್‍ಡೌನ್ ವೇಳೆ ದಿವ್ಯಾಂಗ ಸಮುದಾಯ ಸಂಕಷ್ಟದಲ್ಲಿದೆ. ಇನ್ನಷ್ಟು ಸಂಘ-ಸಂಸ್ಥೆಗಳು ವಿಕಲಚೇತನರ ಸಮುದಾಯಕ್ಕೆ ಸಹಾಯ ಮಾಡಲು ಮುಂದೆ ಬರಬೇಕು ಎಂದು ಮನವಿ ಮಾಡಿದರು.

ಎಸ್ಡಿಎಂ ಪ್ರಾಧ್ಯಾಪಕ ವಾಸುದೇವ ಪರ್ವತಿ, ಉದ್ಯಮಿ ಸುಜಯ್ ಕುಮಾರ್, ಒಕ್ಕೂಟದ ಗೌರವಾಧ್ಯಕ್ಷ ಮಹ್ಮದಗೌಸ್ ಕಳಸಾಪೂರ, ಉಪಾಧ್ಯಕ್ಷೆ ಮಂಗಳಾ ಬೆಟಗೇರಿ, ಸತೀಶ ಹೆಗ್ಗಣ್ಣವರ, ಬಸವರಾಜ ಉಪ್ಪಾರ ಇದ್ದರು.