ಆಹಾರ ಕಿಟ್ ವಿತರಣೆ; ದಾನಿಗಳಿಗೆ ಪ್ರೇರಣೆ ; ಡಾ. ಶಾಂತರಾಜ್

ಸನಗರ.ಮೇ.೨೭; ಕರೋನ ಗ್ರಾಮೀಣ ಭಾಗಕ್ಕೂ ಹರಡುತ್ತಿದ್ದು, ಜನಸಾಮಾನ್ಯರ ಬದುಕು ಮೂರಾಬಟ್ಟೆ ಆಗುತ್ತಿದೆ. ಶ್ರಮಿಕವರ್ಗವು ಒಪ್ಪೊತ್ತಿನ ಕೂಳಿಗು ಪರಿತಪಿಸುವಂತಾಗಿದೆ. ಈ ಸಂದಿಗ್ದ ಸ್ಥಿತಿಯಲ್ಲಿ ಸಂಘ-ಸAಸ್ಥೆಗಳು ಅಂತಹ ಕುಟುಂಬಗಳಿಗೆ ನೆರವಿನ ಹಸ್ತೆ ಚಾಚಲು ಮುಂದಾಗಿರುವುದು ಪ್ರಶಂಷನೀಯ ಸಂಗತಿಯಾಗಿದೆ ಎಂದು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಾಂತರಾಜ್ ಅಭಿಪ್ರಾಯಪಟ್ಟರು.ಸ್ಥಳೀಯ ಲಯನ್ಸ್ ಕ್ಲಬ್, ಕಳೂರು ಸೊಸೈಟಿ, ಡಿವಿಆರ್ ಆಟೋಮೊಬೈಲ್ಸ್, ಎಂ.ಎನ್. ಅಂಬಾಪ್ರಸಾದ್ ಅಭಿಮಾನಿ ಬಳಗವು ಸಂಯುಕ್ತವಾಗಿ ಕೊರೋನ ಫ್ರೆಂಟ್‌ಲೈನ್ ವಾರಿರ‍್ಸ್ ಆದ ಆಂಗನವಾಡಿ ಸಹಾಯಕರಿಯರು, ಆಶಾ ಕಾರ್ಯಕರ್ತೆಯರು, ಆಸ್ಪತ್ರೆ ದಿನಗೂಲಿ ನೌಕರರು, ಸ್ಥಳೀಯ ಹಲವು ಫೈಂರ‍್ಸ್ಗಳಿಗಾಗಿ ಆಯೋಜಿಸಿದ್ದ, ಉಚಿತ ಆಹಾರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಿಟ್ ವಿತರಿಸಿ ಅವರು ಮಾತನಾಡಿದರು.ಸಂಕಷ್ಟ ಸಂದರ್ಭದಲ್ಲಿ ಸಂಘ-ಸAಸ್ಥೆಗಳು ಆಹಾರದ ಕಿಟ್ ವಿತರಿಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದು, ಇದು ಆಶಾದಾಯಕ ಬೆಳವಣಿಗೆ ಆಗಿದೆ. ಅಲ್ಲದೆ, ಇತರೆ ದಾನಿಗಳಿಗೂ ಪ್ರೇರಣೆಯಾಗಲಿದೆ ಎಂದರು.ಲಯನ್ಸ್ ಸಂಸ್ಥೆ ಅಧ್ಯಕ್ಷ ಡಾ. ಪ್ರವೀಣ್, ಲ|| ಎಂ.ಎನ್. ಸುಧಾಕರ್, ದುರ್ಗಾ ಹೋಟೆಲ್ ಮಾಲೀಕ ಲ|| ಉದಯ್ ಶೆಟ್ಟಿ, ಲ|| ಬಾವಿಕಟ್ಟೆ ಸತೀಶ್, ವೈದ್ಯಾಧಿಕಾರಿ ಲಿಂಗರಾಜ್, ತೀರ್ಥಹಳ್ಳಿ ಕಿರಣ್ ನರ್ಸಿಂಗ್ ಹೋಂನ ಡಾ. ಗಣೇಶ್ ಶೆಣೈ, ಕಳೂರು ಸೊಸೈಟಿ ಅಧ್ಯಕ್ಷ ದುಮ್ಮ ವಿನಯ್ ಗೌಡ, ಡಿವಿಆರ್ ಅಟೋ ಮೊಬೈಲ್ಸ್ ಮಾಲೀಕ ಮಲ್ಲಿಕ, ಸ್ನೇಹ ಸ್ಟೂಡಿಯೊ ಮಾಲೀಕ ದೀಪಕ್ ಸ್ವರೂಪ್, ಗುಬ್ಬಿಗಾ ಹಾರ್ಡ್ವೇರ್ ಮಾಲೀಕ ಗುಬ್ಬಿಗ ರವಿ ಮೊದಲಾದವರು ಇದ್ದರು.ಚಿತ್ರ;27ಹೆಚ್‌ಓಎಸ್‌ಪಿ1; ಲಂiÀiನ್ಸ್ ಸಂಸ್ಥೆ ಹಾಗೂ ವಿವಿಧ ಸಂಘ/ಸAಸ್ಥೆಗಳ ಸಹಯೋಗದಲ್ಲಿ ಕರೋನಾ ಹಿನ್ನಲೆಯಲ್ಲಿ ಹೊಸನಗರದಲ್ಲಿ ಅರ್ಹ ಬಡ ಫಲಾನುಭವಿಗಳಿಗೆ ಆಹಾರ ಕಿಟ್ ವಿತರಿಸಲಾಯ್ತು.