ಆಹಾರ ಕಿಟ್ ವಿತರಣೆಗೆ ಸಂತೋಷ ಶೆಟ್ಟಿ ಚಾಲನೆ


ಹುಬ್ಬಳ್ಳಿ,ಮೂ.3: ಕೊರೊನಾ ಲಾಕ್ ಡೌನ್ ನಿಂದಾಗಿ ಬಡವರು ಹಾಗೂ ನಿರ್ಗತಿಕರ ಬದುಕು ಕಷ್ಟಕರವಾಗಿದ್ದು, ಹಸಿವು ನೀಗಿಸುವ ಹಿತ ದೃಷ್ಟಿಯಿಂದಾಗಿ ಆಹಾರದ ಪ್ಯಾಕೆಟ್ , ಬಿಸ್ಕತ್ತು, ಶುದ್ದ ನೀರು ವಿತರಣೆ ಕಾರ್ಯಕ್ರಮಕ್ಕೆ ವಿಶ್ವಮಾನ್ಯ ಪ್ರಶಸ್ತಿ ಪುರಸ್ಕೃತ ಹಾಗೂ ಸಮಾಜ ಸೇವಕರಾದ ಸಂತೋಷ ಆರ್, ಶೆಟ್ಟಿ ಇವರು ಚಾಲನೆ ನೀಡಿದರು.
ಡಾ. ದೀಪಕ ಕಲಾದಗಿ ಅಭಿಮಾನಿ ಬಳಗ ಹುಬ್ಬಳ್ಳಿ ಹಾಗೂ ಮಕ್ಕಳ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಹಮ್ಮಿಕೊಂಡಿರುವ ಆಹಾರ ವಿತರಣೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಇಂದು 6ನೆ ದಿನ ಪೂರೈಸಿ ಬಡವರ ಹಸಿವು ನೀಗಿಸಲು ಮುಂದಾಗಿದೆ.
ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಮುಂಬಾಗ ಇರುವ ಪಾದಚಾರಿ ರಸ್ತೆಯ ಮೇಲೆ ವಾಸವಾಗಿರುವ ನಿರ್ಗತಿಕರು ,ಅಸಹಾಯಕರು ನಿರಾಶ್ರಿತರು , ಇವರಿಗೆಲ್ಲರೂ ಸರದಿ ಸಾಲಿನಂತೆ ಬಂದವರಿಗೆ ಅನ್ನದ ಪ್ಯಾಕೆಟ್ ನೀಡಲಾಯಿತು.
ಈ ವೇಳೆ ಮಾತನಾಡಿದ ವಿಶ್ವಮಾನ್ಯ ಪುರಸ್ಕೃತರಾದ ಸಂತೋಷ ಆರ್. ಶೆಟ್ಟಿ ಅವರ
, ಲಾಕ್ ಡೌನ್ ನಿಂದಾ ಸಾಕಷ್ಟು ಬಡವರು ಹಸಿವಿನಿಂದ ಬಳಲುತ್ತಿದ್ದಾರೆ. ನಮ್ಮ ಈ ಸಣ್ಣ ಕಾರ್ಯವು ಬಡವರಿಗೆ ಸದುಪಯೋಗವಾಗಲಿ ಎಂದ ಅವರು ಕೋವಿಡ್ ಸೋಂಕನ್ನು ಎಲ್ಲರೂ ಒಗ್ಗಟ್ಟಾಗಿ ಹೊಡೆದೊಡಿಸೋಣ ಎಂದರು.
ಸಂತೋಷ ಆರ್ ಶೆಟ್ಟಿಯವರು ಸಾದಾ ಸೀದಾ ವ್ಯಕ್ತಿತ್ವ ಹೊಂದಿರುವ ನಮ್ಮ ಹೆಮ್ಮೆಯ ಬಡವರ ಬಂದು ಸದಾ ಕಲಾವಿದರ ಬೆನ್ನಲೆಬು ಆಗಿರುವ ಸಮಾಜ ಸೇವಕರು, ಯುವ ನಾಯಕರು, ಜನ ಸೇವಕ ಇವೆಲ್ಲ ನಾಯಕತ್ವ ಹೊಂದಿರುವ, ನಿಮಗೆ
ಅಭಿನಂದನೆಗಳು ಎಂದು ಡಾ. ದೀಪಕ ಕಲಾದಗಿ ಅಭಿಮಾನಿ ಬಳಗ ಹುಬ್ಬಳ್ಳಿ ಹಾಗೂ ಮಕ್ಕಳ ಸಾಹಿತ್ಯ ಪರಿಷತ್ತು ಸಹಯೋಗ ಶ್ಲಾಘಸಿತು.
ಈ ಸಂದರ್ಭದಲ್ಲಿ ಮಕ್ಕಳ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸಂಜೀವ್ ದುಮಕನಾಳ್, ಸರ್ವ ಧರ್ಮದ ಸ್ವಯಂ ಸೇವಕರಾದ ಆನಂದ ದಲಬಂಜನ ಸೇರಿದಂತೆ ಕರ್ನಾಟಕ ಸಂಗ್ರಾಮ ಸೇನೆ ಸದಸ್ಯರು ಪಾಲ್ಗೊಂಡಿದ್ದರು