ಆಹಾರ ಅಭದ್ರತೆ ನಿವಾರಣೆಗೆ ಜಗಜೀವನರಾಮ್ ಪಾತ್ರ ಬಹುಮಖ್ಯ: ಪ್ರೊ.ಡಿ.ಬಿ.ನಾಯ್ಕ್

ಶಿಗ್ಗಾವಿ,ಏ6: ಹಸಿರು ಕ್ರಾಂತಿಯ ಹರಿಕಾರರು ಎಂದು ಕರೆಸಿಕೊಳ್ಳುವ ಬಾಬು ಜಗಜೀವನರಾಮ ಅವರು ಆಹಾರದ ಅಭದ್ರತೆ ಹೊಗಲಾಡಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಡಿ.ಬಿ. ನಾಯಕ ಅವರು ಅಭಿಪ್ರಾಯಪಟ್ಟರು.
ತಾಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಆಡಳಿತಭವನದ ಮಲ್ಲಿಗೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ.ಬಾಬು ಜಗಜೀವನರಾಮ್ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದೇಶದ ಅಭಿವೃದ್ಧಿಯಲ್ಲಿ ಅವರು ಕೈಗೊಂಡ ಆಡಳಿತಾತ್ಮಕ ನಿರ್ಧಾರಗಳು ಇಂದಿಗೂ ಪ್ರಸ್ತುತ. ದೇಶದ ಕೃಷಿ ಹಾಗೂ ರಕ್ಷಣಾ ಸಚಿವರಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ ಅವರು ದೇಶದ ಪ್ರಧಾನ ಮಂತ್ರಿಯಾಗುವ ಸಾಮಥ್ರ್ಯವನ್ನು ಹೊಂದಿದ್ದರು ಎಂದು ಅಭಿಪ್ರಾಯಪಟ್ಟರು.
ಕಜಾವಿವಿಯ ಕುಲಸಚಿವರಾದ ಪೆÇ್ರ.ಕೆ.ಎನ್ ಗಂಗಾನಾಯಕ ಅವರು ಮಾತನಾಡಿ, ಶೋಷಿತರ ಹಾಗೂ ದಲಿತ ಧ್ವನಿಯಾಗಿ ಸಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಹೋರಾಟ ಮಾಡಿದವರಲ್ಲಿ ಪ್ರಮುಖವಾಗಿ ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಮ ಅವರ ಅಗ್ರಗಣ್ಯರು. ಸಮ ಸಮಾಜ ನಿರ್ಮಾಣದಲ್ಲಿ ಶ್ರಮಿಸಿದ ಇಂತಹ ಮಹಾನಾಯಕರ ಜಯಂತಿ ಆಚರಿಸುವ ಮೂಲಕ ಅವರ ಚಿಂತನೆಗಳನ್ನು ಮುಂದಿನ ಪೀಳಿಗೆಯವರಿಗೆ ತಿಳಿಯ ಪಡಿಸುವ ಕಾರ್ಯ ಅಗತ್ಯವಾಗಿ ಆಗಬೇಕಾಗಿದೆ ಎಂದು ಹೇಳಿದರು.
ಜನಪದ ಕಲಾ ಅಧ್ಯಾಪಕರಾದ ಶರೀಫ್ ಮಾಕಪ್ಪನವರ ಅವರು ಪ್ರಾರ್ಥಿಸಿದರು. ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕರಾದ ಡಾ.ಮಲ್ಲಿಕಾರ್ಜುನ ಮಾನ್ಪಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲರನ್ನೂ ಸ್ವಾಗತಿಸಿ, ವಂದಿಸಿದರು. ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.