ಆಹಾರವೇ ಔಷಧಿಯಾಗಬೇಕು

ಧಾರವಾಡ,ಜ25 : ಅರಿವಿನ ಸ್ವರೂಪ ನೀಡುವ ಆಹಾರ ಮತ್ತು ಯೋಗ ಪದ್ದತಿ ಸುಲಭವಾಗಿದ್ದು ಇದು ದೈಹಿಕ ಹಾಗೂ ಮನೋನಿಯಂತ್ರಣ ಮಾಡುವ ವಿಧಾನವಾಗಿದೆ, ಇದು ವೈಚಾರಿವೂ ವೂಜ್ಞಾನಿಕವೂ ಆಗಿದೆ ಎಂದು ಆಯುರ್ವೇದ ತಜ್ಞ ವೈದ್ಯೆ ಡಾ. ರಾಜೇಶ್ವರಿ ಶ್ರೀವತ್ಸ್ ನವಲೂರ ಹೇಳಿದರು.

ಶಹರದ ಚರಂತಿಮಠ ಗಾರ್ಡನದಲ್ಲಿ ಶ್ರೀ ಬನಶಂಕರಿ ಭವನದ 9 ನೇ ವಾರ್ಷಿಕೋತ್ಸವ ಹಾಗೂ ಬನಶ್ರೀ ಪ್ರಶಸ್ತಿ ಪ್ರಧಾನ ಮತ್ತು ಆಟೋ ಚಾಲಕರಿಗೆ ಗೃಹಪಯೋಗಿ ವಸ್ತು ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಹಿರಿಯ ನ್ಯಾಯವಾದಿ ಪಿ.ಎಚ್.ನೀರಲಕೇರಿ ಸಾಧಕರಿಗೆ ಬನಶ್ರೀ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿ, ಸಮಾಜ ವ್ಯವಸ್ಥೆ, ವ್ಯಕ್ತಿ, ದುಡಿಮೆ, ವ್ಯವಹಾರ, ಆರ್ಥಿಕ ವ್ಯವಸ್ಥೆಯ ಏರುಪೇರುಗಳ ಆಗುಹೋಗುಗಳ ಪ್ರಜ್ಞೆ ಇರಬೇಕು ಎಂದರು.

ಶ್ರೀ ಬನಶಂಕರಿ ಭವನದ ಸಂಸ್ಥಾಪಕ ಶಿವಾನಂದ ಲೋಲೆನವರ ಅಧ್ಯಕ್ಷತೆವಹಿಸಿ ಮಾತನಾಡಿದರು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಜಯಲಕ್ಷಿ?ಮೀ ಎಚ್, ಕಾಂಗ್ರೇಸ್ ಮುಖಂಡ ಸದಾನಂದ ಡಂಗನವರ ವೇದಿಕೆಯಲ್ಲಿದ್ದರು. ರವಿಕುಮಾರ ಆಶಯ ನುಡಿಗಳನ್ನಾಡಿದರು. ಡಾ.ಕಲ್ಮೇಶ ಹಾವೇರಿಪೇಟ, ಈಶ್ವರ ಸಾಣಿಕೊಪ್ಪ, ರಮೇಶ ಜಾನಕ್ಕಿ, ನಿಜನಗೌಡ ಪಾಟೀಲ, ಎಂ.ಎಂ.ಬೇಪಾರಿ ಇವರಿಗೆ ಬನಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಪ್ರಭು ಹಂಚಿನಾಳ ನಿರೂಪಿಸಿದರು. ಲತಾ ದೇವಾಂಗದ ಸ್ವಾಗತಿಸಿದರು. ರಾಘವೇಂದ್ರ ವಂದಿಸಿದರು.