ಆಹಾರದ ಪೊಟ್ಟಣ ವಿತರಣೆ

ಕಾರಟಗಿ, ಜೂ.08: ತಾಲೂಕಿನ ಶ್ರೀರಾಮಗರದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಪನ್ಯಾಸಕರು ಹಾಗೂ ಖಾಸಗಿ ಶಾಲೆಗಳ ಶಿಕ್ಷಕರಿಗೆ ಆಹಾರದ ಪೊಟ್ಟಣವನ್ನು ಕನಕಗಿರಿ ಬ್ಲಾಕ್ ಅಧ್ಯಕ್ಷ ರಡ್ಡಿ ಶ್ರೀನಿವಾಸ್ ವಿತರಿಸಿದರು,
ನಂತರ ಮಾತನಾಡಿದ ಅವರು, ಕರೋನಾ ಬಂದಾಗಿನಿಂದಲೂ ಅತಿಥಿ ಉಪನ್ಯಾಸಕರು ಹಾಗೂ ಖಾಸಗಿ ಶಾಲೆಗಳ ಶಿಕ್ಷಕರಿಗೆ ಸಂಬಳವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ ಈ ನಿಟ್ಟಿನಲ್ಲಿ ಮರಳಿ ಭಾಗದ ಅತಿಥಿ ಉಪನ್ಯಾಸಕರು ಹಾಗೂ ಶಿಕ್ಷಕರ ಕುಟುಂಬಗಳಿಗೆ ಸ್ವಲ್ಪ ಸಹಾಯ ಮಾಡುವಾದಾಗಿ ಅವರು ತಿಳಿಸಿದರು.