ಆಸ್ಪತ್ರೆ ಸಮಸ್ಯೆ ಪರಿಹಾರಕ್ಕೆ ಮನವಿ

ಶಿಡ್ಲಘಟ್ಟ.ಫೆ೪:ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ, ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರ ನಿರ್ಲಕ್ಷ್ಯತನದಿಂದ ತೊಂದರೆ ಉಂಟಾಗಿರುತ್ತದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಎನ್.ಎ.ವೆಂಕಟೇಶ್ (ವೆಂಕಿ) ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಗರ್ಭಿಣಿಯರು ಹೆರಿಗೆಗೆ ಬಂದಾಗ ಸರಿಯಾಗಿ ಪರೀಕ್ಷಿಸದೆ ಬೇರೆ ಆಸ್ಪತ್ರೆಗೆ ಹೋಗಲು ಶಿಫಾರಸ್ಸಿನಿಂದ ಬಡವರಿಗೆ ತೊಂದರೆಗೆ ಒಳಗಾಗುತ್ತಿದ್ದಾರೆ. ಕೆಲವು ಬಾರಿ ಜಿಲ್ಲಾ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆದಲ್ಲಿಯೇ ಸಾಮಾನ್ಯ ಹೆರಿಗೆ ಆಗಿರುವುವ ಉದಾಹರಣೆಗಳಿವೆ.
ರಾತ್ರಿ ವೇಳೆಯಲ್ಲಿ ಬರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯರು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಹಾಜರಾದರೂ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಒಳ ರೋಗಿಗಳಿಗೆ ತಿಂಡಿ ವ್ಯವಸ್ಥೆಗಾಗಿ ಆಸ್ಪತ್ರೆಯ ಆವರಣದಲ್ಲಿ ಸರಿಯಾದ ಕ್ಯಾಂಟೀನ್ ಅವಷ್ಯಕತೆ ಇದೆ.
ಮೂಳೆಗೆ ಸಂಬಂಧಿಸಿದ ಖಾಯಿಲೆಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ಅಪರೇಷನ್ ಸಹ ಮಾಡುತ್ತಿಲ್ಲ
ಕಿವಿ ಮೂಗು ಗಂಟಲು ರೋಗಗಳಿಗೆ ಚಿಕಿತ್ಸೆ ನೀಡುತ್ತಿಲ್ಲ ಹಾಗೂ ಅಂಗವಿಕಲತೆಯ ಶೇಕಡವಾರು ಪರೀಕ್ಷೆ ಮಾಡುವ ಯಂತ್ರವನ್ನು ಇದುವರೆವಿಗೂ ಬಳಸಿರುವುದಿಲ್ಲ. ಪ್ರಯೋಗಾಲಯದಲ್ಲಿ ಪರೀಕ್ಷೆಗಳು ಸರಿಯಾಗಿ ನಡೆಸುತ್ತಿಲ್ಲ, ಯಂತ್ರೋಪಕರಣಗಳು ಸರಿಯಾದ ರೀತಿಯಲ್ಲಿ ರೋಗಿಗಳಿಗೆ ಬಳಕೆ ಮಾಡುತ್ತಿಲ್ಲ. ಆಸ್ಪತ್ರೆಯಲ್ಲಿ ೧೦೦ ಹಾಸಿಗೆಗಳನ್ನು ಹೊಂದಿದ್ದರೂ ಸಹ ಕೇವಲ ೫ ರಿಂದ ೧೦ ರೋಗಿಗಳು ಮಾತ್ರ ದಾಖಲಾಗುತ್ತಿದ್ದು ಉಳಿದ ರೋಗಿಗಳನ್ನು ಉದ್ದೇಶ ಪೂರಕವಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸುತ್ತಿದ್ದಾರೆ ಎಂದು ಮುಂತಾದ ಸಮಸ್ಯೆಗಳು ಶೀಘ್ರವಾಗಿ ಬಗೆ ಹರಿಸಿ ರೋಗಿಗಳಿಗೆ ಉತ್ತಮ ಆರೋಗ್ಯ ನೀಡಲು ವ್ಯವಸ್ಥಿತವಾದ ವೈದ್ಯಕೀಯ ಆಸ್ಪತ್ರೆಯನ್ನಾಗಿ ಮಾಡಿ ಎಂದು ತಾಲ್ಲೂಕು ದಲಿತ ಸಂಘರ್ಷ ಸಮಿತಿ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಮನವಿ ನೀಡಿದರು.