ಆಸ್ಪತ್ರೆ ಮುಂದೆ ಹೆರಿಗೆ

ವಿಜಯಪುರ,ಫೆ 24: ಹೆರಿಗೆಗೆ ಹೊರಟಿದ್ದ ಗರ್ಭಿಣಿಗೆ ಆಸ್ಪತ್ರೆಯ ಎದುರಲ್ಲೇ ಹೆರಿಗೆ ಆಗಿರುವ ಘಟನೆ ವಿಜಯಪುರ ತಾಲ್ಲೂಕಿನ ನಾಗಠಾಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರಿನ ಆವರಣದಲ್ಲಿ ಇಂದು ನಡೆದಿದೆ.
ವಿಜಯಪುರ ತಾಲ್ಲೂಕಿನ ಚವ್ಹಾಣ ದೊಡ್ಡಿಯ ಗರ್ಭಿಣಿ ಅನು ಬೇವು ಕೊಳೆಕರಗೆ ಹೆರಿಗೆ ಆಗಿದೆ. ಮುಂಜಾನೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ತರುವಾಗ ಹೆರಿಗೆ ಆಗಿದೆ. ಆದರೆ, ಹೆರಿಗೆಯಾಗಿ ಅರ್ಧ ಗಂಟೆ ನವಜಾತ ಶಿಶುವಿನ ಹುರಿ ಕತ್ತರಿಸದಿದ್ದರಿಂದ ಬಾಣಂತಿ ನರಳಾಟ ಅನುಭವಿಸಿದ್ದಾಳೆ. ನಂತರ ಅರ್ಧ ಗಂಟೆ ಬಿಟ್ಟು ಬಂದ ಆಸ್ಪತ್ರೆಯ ಸಿಬ್ಬಂದಿ ಚಿಕಿತ್ಸೆ ನೀಡಿದ್ದಾರೆ. ಇದೀಗ ತಾಯಿ ಮಗು ಆರೋಗ್ಯವಾಗಿ ಇದ್ದಾರೆ.