ಆಸ್ಪತ್ರೆ ಮುಂದೆ ಚರಂಡಿ ನೀರು!ಕ್ಯಾರೇ ಎನ್ನದ ಅಧಿಕಾರಿಗಳು

ಯಡ್ರಾಮಿ:ಜು.28:ತಾಲೂಕಿನ ಹಂಗಾರಗ ಬಿ ಗ್ರಾಮದಲ್ಲಿರುವ ಪ್ರಾಥಮಿಕ ಅರೋಗ್ಯ ಕೇಂದ್ರ ಮುಂದೆಯೇ ವಲಸೆಯಾದ ಚರಂಡಿ ನೀರನ್ನು ನಿಂತು ದೂರವಾಸನೆ ಒಡೆಯತಿದ್ದರು ಕ್ಯಾರೇ ಎನ್ನದ ಅಧಿಕಾರಿಗಳು,ಆರೋಗ್ಯ ಕಾಪಾಡುವ ಆಸ್ಪತ್ರೆ ಎದುರೇ ಚರಂಡಿ ನೀರು? ಮನುಷ್ಯರು ತಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕೆಂದು ಗೊಂದಲದಲ್ಲಿ ಜನರು ಇದ್ದಾರೆ ಈ ಕಡೆ ತಿರುಗಿ ನೋಡದ ಅಧಿಕಾರಿಗಳು!!ಅಧಿಕಾರಿಗಳ ಮನೆ ಮುಂದೆ ಚರಂಡಿ ನೀರು ನಿಂತರೆ ದಿಡಿರನೇ ಸ್ವಚ್ಛಗೊಳಿಸುತ್ತಾರೆ ಆದರೆ ಸಣ್ಣ ಸಣ್ಣ ಹಳ್ಳಿಗಳಲ್ಲಿ ಈ ರೀತಿ ಪರಿಸ್ಥಿತಿ ಇದ್ದಾರೆ ಗ್ರಾಮದ ಜನರ ಪರಿಸ್ಥಿತಿ ಹೇಗಿರುವುದು ಸ್ವಾಮಿ ಎಂದು ಗ್ರಾಮದ ಜನರ ಅಳಲು ಹೇಳಿಕೊಂಡಿದ್ದಾರೆ.
ಆಸ್ಪತ್ರೆ ಮುಂದೆ ನಿಂತಿರುವ ಚರಂಡಿಯ ನೀರಿನ ಬಗ್ಗೆ ಹಲವಾರು ಬಗ್ಗೆ ನಾವು ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿದರೆ ಯಾವ ಅಧಿಕಾರಿಯು ಕೊಡ ಈ ಕಡೆ ತಿರುಗಿ ನೋಡದೆ ಇದ್ದಾರೆ, ಹಳ್ಳಿಗಳಲ್ಲಿ ಇಂತಹ ಪರಿಸ್ಥಿತಿ ಇದ್ದರೆ ಇದ್ದಿದರಿಂದ ಗ್ರಾಮದ ಜನರಿಗೆ ಹಲವಾರು ಕಾಯಿಲೆ ಬರುತಿದ್ದಾವೆ ಇದರಿಂದ ಸಾರ್ವಜನಿಕರ ಆರೋಗ್ಯ ಕೆಟ್ಟು ಅನಾರೋಗ್ಯದಿಂದ ಜನರು ಬಳಲುತ್ತಿದ್ದಾರೆ ಎಂದು ಶ್ರೀ ರಾಮ ಸೇನೆಯ ತಾಲೂಕು ಅಧ್ಯಕ್ಷರಾದ ಸಿದ್ದು ಹಂಗಾರಗಿ ಹೇಳಿದ್ದಾರೆ.