ಆಸ್ಪತ್ರೆ ಬಾಗಿಲು ತೆರೆಸಿದ ಕೊರೊನಾ

ಕೋಲಾರ, ಮೇ ೩: ಪ್ರಾಚೀನ ಕಾಲದ ಬ್ರಿಟಿಷರ ಆಡಳಿತದಲ್ಲಿ ಸ್ಥಾಪನೆಯಾಗಿದ್ದ, ಚಿನ್ನದ ಗಣಿಯಲ್ಲಿ ಕೆಲಸ ಮಾಡೋ ಕಾರ್ಮಿಕರಿಗಾಗಿಯೇ ಮೀಸಲಿದ್ದ, ಅಂದಿನ ಕಾಲದ ಸೂಪರ್ ಸ್ಪೆಷಲ್ ಆಸ್ಪತ್ರೆ. ಅಲ್ಲದೆ ಏಷ್ಯಾದಲ್ಲೆ ಅತ್ಯಂತ ಸುಸಜ್ಜಿತ ಆಸ್ಪತ್ರೆ ಎಂದೆನಿಸಿಕೊಂಡಿದ್ದ ಈ ಆಸ್ಪತ್ರೆ ಗಣಿ ಕೆಲಸ ಸ್ಥಗಿತವಾದ ನಂತರ ಆಸ್ಪತ್ರೆ ಕೂಡ ತನ್ನ ಕೆಲಸ ನಿಲ್ಲಿಸಿತ್ತು. ಇಪ್ಪತ್ತು ವರ್ಷಗಳ ನಂತರ ಈಗ, ಬಂದಿರುವ ಮಹಾಮಾರಿ ಕೋರೋನ ಈ ಆಸ್ಪತ್ರೆ ಬಾಗಿಲು ತೆರೆಯುವಂತೆ ಮಾಡಿದೆ.
ಹೌದು ಒಮ್ಮೆ ಇಲ್ಲಿಗೆ ಭೇಟಿ ನೀಡಬೇಕು ಎಂದುಕೊಂಡಿದ್ರೆ, ಈ ಮೊದಲಿ ಇಲ್ಲಿ ಕಾಣಿಸುತ್ತಿದ್ದದ್ದು, ಅವರಣದಲ್ಲಿ ಬೆಳೆದು ನಿಂತಿರುವ ದೊಡ್ಡ ಗಿಡಗಂಟೆಗಳು, ಕಟ್ಟಡಗಳ ಮೇಲೆಯೇ ಬೆಳೆದುನಿಂತ ಆಳೆತ್ತರದ ಮುಳ್ಳುಗಿಡಗಳು, ತುಕ್ಕು ಹಿಡಿದ ಸಲಕರಣೆಗಳು, ದೂಳು ಹಿಡಿದ ರಿಜಿಸ್ಟ್ರಾರ್ ಬುಕ್‌ಗಳು, ೨೦೦೧ರ ಮಾರ್ಚ್ ಗೆ ಸ್ಥಗಿತಗೊಂಡ ಆಸ್ಪತ್ರೆ ದಿನಚರಿ ಪುಸ್ತಕಗಳು, ಕೆಜಿಎಫ್ ನ ಪುರಾತನ ಬಿಜಿಎಂಎಲ್ ಆಸ್ಪತ್ರೆಯಲ್ಲಿ ಕಾಣಿಸುತ್ತಿತ್ತು.
ಹೌದು ಕೋಲಾರದ ಕೆಜಿಎಪ್ ಚಿನ್ನದ ಗಣಿ ಪ್ರದೇಶ ಈಗಲೂ ಸಹ ಒಂದಿಲ್ಲೊಂದು ವಿಶೇಷಗಳಿಗೆ ಸಾಕ್ಷಿಯಾಗಿದೆ. ಮೈಸೂರು ರಾಜರ ಕಾಲದಿಂದಲೂ ಇಲ್ಲಿ ಚಿನ್ನಕ್ಕಾಗಿ ಗಣಿಗಾರಿಕೆ ನಡೆಯುತಿದ್ದು ನಂತರ ಬ್ರಿಟಿಷರ ಕಾಲದಲ್ಲಿ ಆಧುನಿಕತೆ ಪಡೆದುಕೊಂಡಿತ್ತು. ಸಾವಿರಾರು ಮಂದಿ ಕಾರ್ಮಿಕರು ಇಲ್ಲಿಯ ಗಣಿಗಳಲ್ಲಿ ಕೆಲಸಮಾಡುತಿದ್ದರು. ಗಣಿಯ ಆಳದಲ್ಲಿ ಕೆಲಸ ಮಾಡುತಿದ್ದ ಕಾರ್ಮಿಕರು ಮತ್ತು ಬ್ರಿಟಿಷ್ ಅಧಿಕಾರಿಗಳ ಆರೋಗ್ಯದಲ್ಲಿ ಹಲವು ಏರುಪೇರುಗಳು, ಸಮಸ್ಯೆಗಳು ಕಾಣಿಸುತಿದ್ದವು.ಇವರ ಆರೋಗ್ಯಕ್ಕಾಗಿಯೇ ಮೀಸಲು ಇದ್ದ ಆಸ್ಪತ್ರೆ ಈ ಬಿಜಿಎಂಎಲ್ ಆಸ್ಪತ್ರೆ. ೨೦೦೧ರಲ್ಲಿ ಗಣಿ ಕೆಲಸಗಳು ಸ್ಥಗಿತವಾದಾಗ ಆಸ್ಪತ್ರೆ ಕೂಡ ಬಾಗಿಲು ಮುಚ್ಚಲಾಗಿತ್ತು. ಅಂದು ಮುಚ್ಚಿದ ಬಾಗಿಲು ಈಗ ಕೋರೋನ ಹಿನ್ನಲೆಯಲ್ಲಿ ತೆರೆಯಲಾಗುತ್ತಿದೆ.ಎರಡು ದಶಕಗಳಿಂದ ಮುಚ್ಚಿ ಕೊಂಪೆಯಾಗಿದ್ದ ಆಸ್ಪತ್ರೆ ವಾಗಿಲು ತೆಗೆಯುವ ಶುಭಗಳಿಗೆ ಕೂಡಿ ಬಂದಿದೆ. ಕೆಜಿಎಫ್ ನ ಕಾರ್ಮಿಕರಿಗೆ ಬ್ರಿಟಿಷ್ ಅಧಿಕಾರಿಗಳಿಗೆ ಈ ಅಂದಿನ ಕಾಲದಿಂದಲೂ ಸಂಜೀವಿನ ನೀಡಿದ್ದ ಆಸ್ಪತ್ರೆ ಮತ್ತೆ ಕಳೆಗಟ್ಟುವತ್ತ ಸಾಗಿದೆ.
ಕೆಜಿಎಫ್ ನಗರವೊಂದರಲ್ಲಿಯೇ ದಿನೇ ದಿನೇ ಕೋವಿಡ್ ಪ್ರಕರಣಗಳು ಹೆಚ್ಚಾಗುತಿದ್ದು, ಬೆಡ್ ಗಳ ಕೊರತೆ ಹೆಚ್ಚಾಗಿದೆ ಚಿಕಿತ್ಸೆ ಗಾಗಿ ೩೦ ಕಿಲೋಮೀಟರ್ ದೂರದ ಕೋಲಾರ ಕ್ಕೆ ಹೋಗಬೇಕಾಗುತ್ತದೆ. ಸದ್ಯ ಬೆಡ್ ಗಳ ಕೊರತೆ ನೀಗಿಸಲು ಇದ್ದ ಉಪಾಯ ಈ ಬಿಜಿಎಂಎಲ್ ಆಸ್ಪತ್ರೆ. ಸದ್ಯ ಕೇಂದ್ರ ಸರ್ಕಾರದ ಗಣಿ ಇಲಾಖೆಯ ಸುಪರ್ದಿಯಲ್ಲಿರುವ ಆಸ್ಪತ್ರೆಯನ್ನ ಜಿಲ್ಲಾಧಿಕಾರಿ ಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕಟ್ಟಡಗಳಲ್ಲಿ ಇನ್ನೂರಕ್ಕು ಹೆಚ್ಚು ಬೆಡ್ ವ್ಯವಸ್ಥೆ ಮಾಡಲು ಚಿಂತನೆ ನಡೆದಿದ್ದು, ಸ್ಥಳೀಯ ಯುವಕರು ನೂರಾರು ಸಂಖ್ಯೆಯಲ್ಲಿ ಭಾವನಾತ್ಮಕ ವಾಗಿ ತಮ್ಮನ್ನು ಸ್ವಯಂ ಸೇವಕರಾಗಿ ತೊಡಗಿಸಿಕೊಂಡಿದ್ದಾರೆ.
ಈಗ ಕೊರೋನ ನೆಪದಲ್ಲಿಯಾದ್ರೂ ಮುಚ್ಚಿದ ಆಸ್ಪತ್ರೆ ಮತ್ತೆ ತೆರಯಲಾಗುತ್ತಿದೆ. ಇದು ಕ್ರಮೇಣ ಮೇಲ್ದರ್ಜೆಗೆ ಏರಿಸಬೇಕು ಮತ್ತು ಆಧುನೀಕರಣ ಮಾಡಬೇಕು. ಕೊರೋನ ಕಾಲ ಮುಗಿದ ನಂತರವೂ ಈ ಆಸ್ಪತ್ರೆ ಮುಂದುವರೆಯಬೇಕು ಎಂದು ಆಗ್ರಹ ಕೂಡ ಕೇಳಿ ಬಂದಿದೆ. ಒಟ್ನಲ್ಲಿ ಕಾರ್ಮಿಕರಿಗೆ ಸಂಜೀವಿನಿ ನೀಡುತಿದ್ದ ಈ ಆಸ್ಪತ್ರೆ ಮುಚ್ಚಿದ್ದು ಸ್ಥಳೀಯರಿಗೆ ಸಾಕಷ್ಟು ನೋವು ನೀಡಿತ್ತು. ಒಂದೆಡೆ ಗಣಿ ಸ್ಥಗಿತಗೊಂಡು ಕೆಲಸ ಕಳೆದುಕೊಂಡಿದ್ದ ಕಾರ್ಮಿಕರಿಗೆ ಇದು ಗಾಯದ ಮೇಲೆ ಬರೆಯಾಗಿತ್ತು. ಸದ್ಯ ಈಗ ಬಂದಿರುವ ಕೊರೋನ ಕಾರಣದಿಂದ ಈ ಆಸ್ಪತ್ರೆ ಮತ್ತೆ ಬಾಗಿಲು ತೆರೆದುಕೊಳ್ಳುತ್ತಿದೆ. ಈ ಆಸ್ಪತ್ರೆ ಕೆಜಿಎಫ್ ಜನತೆ ಪಾಲಿಗೆ ಸಂಜೀವಿನಿಯಾಗಿ ಮುಂದುವರೆಯಲಿ ಎಂಬುದು ನಮ್ಮ ಆಶಯ.