ಆಸ್ಪತ್ರೆ ಕೋವಿಡ್ ಕಸ ಶುಚಿಗೊಳಿಸದ ಯುವಕರು

ಹಿರಿಯೂರು. ಮೇ.28: ನಗರದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಸದಸ್ಯರು ತಮ್ಮ ಸಂಘಟನೆ ವತಿಯಿಂದ ಸ್ವಯಂ ಪ್ರೇರಿತರಾಗಿ ಪರಿಸರ ಸಂರಕ್ಷಣೆ ದೃಷ್ಟಿಯಿಂದ ವಿಶೇಷವಾದ ಕಾರ್ಯಕ್ರಮವನ್ನು ಹಾಕಿಕೊಂಡು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳು ಇರುವ ಕೊಠಡಿಗಳ ಮುಂಭಾಗದಲ್ಲಿ ಮಲಿನವಾಗಿದ್ದ ಕಸವನ್ನು ಶುಚಿಗೊಳಿಸಿ ಧೈರ್ಯದಿಂದ ವಿನೂತನವಾದ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಿರುತ್ತಾರೆ. ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಚಿತ್ರದುರ್ಗ ಜಿಲ್ಲಾ ಉಪಾಧ್ಯಕ್ಷ ಆಫ್‌ತಾಬ್ ಮತ್ತು ಸದಸ್ಯರಾದ ನಜೀರ್, ಸಯೀದ್, ಇಮ್ರಾನ್, ಖಾಲಿದ್ ಮತ್ತಿತರರು ಭಾಗವಹಿಸಿದ್ದರು.