ಆಸ್ಪತ್ರೆ ಆಕ್ಸಿಜನ್ ಕೊರತೆ, ಆತಂಕ, ಪೂರೈಕೆ

ಸಿಂಧನೂರು.ಮೇ.೧೯-ಕೊರೊನಾ ಸೊಂಕಿತರಿಗೆ ಆಕ್ಸಿಜನ್ ಕೊರತೆಯಾಗುವ ಮುನ್ಸೂಚನೆ ಅರಿತುಕೊಂಡ ಶಾಸಕ ವೆಂಕಟರಾವ್ ನಾಡಗೌಡ ಅಧಿಕಾರಿಗಳೊಂದಿಗೆ ಆಸ್ಪತ್ರೆಗೆ ದೌಡಾಯಿಸಿ ಹೋಗಿ ಆಕ್ಸಿಜನ್ ಸಿಲಿಂಡರ್ ಒದಗಿಸುವ ಮೂಲಕ ಸೊಂಕಿತರಿಗೆ ಮಾನವಿಯತೆ ತೋರಿಸಿದ್ದಾರೆ.
ನಗರದ ಸರ್ಕಾರಿ ಆಸ್ಪತ್ರೆಯ ಕೊವಿಡ್ ಸೆಂಟರ್ ನಲ್ಲಿ ದಾಖಲಾದ ಸೊಂಕಿತರಿಗೆ ಆಕ್ಸಿಜನ್ ನೀಡುತ್ತಿದ್ದು ಇನ್ನೊಂದು ಗಂಟೆಯಲ್ಲಿ ಆಕ್ಸಿಜನ್ ಖಾಲಿ ಯಾದರೆ ಮುಂದೆನು ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಗಳು ಶಾಸಕರ ಗಮನಕ್ಕೆ ತಂದಾಗ ಮನೆಯಲ್ಲಿದ್ದ ಶಾಸಕ ನಾಡಗೌಡ ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಬದಿಗೊತ್ತಿ ತಹಶಿಲ್ದಾರರೊಂದಿಗೆ ಆಸ್ಪತ್ರೆಗೆ ದೌಡಾಯಿಸಿ ಬಂದು ಆಕ್ಸಿಜನ್ ಇನ್ನೇನು ಕಡಿಮೆ ಯಾಗಿ ಸೊಂಕಿತರ ಪ್ರಾಣಕ್ಕೆ ಅಪಾಯವಾಗುವದನ್ನು ತಪ್ಪಿಸಲು ಮುಂಜಾಗ್ರತಾ ಕ್ರಮವಾಗಿ ಬಸನಗೌಡ ಫೌಂಡೇಶನ್ ಹಾಗೂ ಖಾಸಗಿ ಆಸ್ಪತ್ರೆಯಿಂದ ಆಕ್ಸಿಜನ್ ಸಿಲಿಂಡರ್ ಗಳನ್ನು ತರಿಸಿ ಸೊಂಕಿತರಿಗೆ ನೇರವಾದರು.
ಸೊಂಕಿತರಿಗೆ ಆಕ್ಸಿಜನ್ ಕೊರತೆ ಬಗ್ಗೆ ಕೂಡಲೇ ಯುವ ಕಾಂಗ್ರೆಸ್ ರಾಜ್ಯದ್ಯಕ್ಷರಾದ ಬಸನಗೌಡ ಬಾದರ್ಲಿ ಗೆ ದೂರವಾಣಿ ಮೂಲಕ ಕರೆ ಮಾಡಿದ ತಕ್ಷಣ ಶಾಸಕರ ಮನವಿಗೆ ಸ್ಪಂದಿಸಿದ ಬಸನಗೌಡ ಬಾದರ್ಲಿ ೧೫ ಆಕ್ಸಿಜನ್ ಸಿಲಿಂಡರ್ ಉಚಿತವಾಗಿ ಒದಗಿಸುವ ಮೂಲಕ ಸೊಂಕಿತರಿಗೆ ಪ್ರಾಣ ಉಳಿಸುವ ಮೂಲಕ ಮಾನವಿಯತೆ ತೊರಿಸಿದರು.
ಕೊವಿಡ್ ಸೆಂಟರ್ ನಲ್ಲಿ ಹಲವಾರು ಜನ ಸೊಂಕಿತರು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಆಕ್ಸಿಜನ್ ಸಹ ನೀಡಲಾಗುತ್ತಿದ್ದು ಒಂದು ತಾಸಿನಲ್ಲಿ ಆಕ್ಸಿಜನ್ ಖಾಲಿಯಾಗಿ ಆಕ್ಸಿಜನ್ ಬಾರದೆ ಹೋದರೆ ಹಲವಾರು ಸೊಂಕಿತರು ಪ್ರಾಣ ಕಳೆದುಕೊಳ್ಳುವ ಸಂಭವವಿತ್ತು ಶಾಸಕರ ಮುಂಜಾಗ್ರತಾ ಕ್ರಮ ಹಾಗೂ ಬಸನಗೌಡ ಬಾದರ್ಲಿ ಅವರ ಮಾನವಿಯತೆ ಸೇವೆಯಿಂದ ಹಲವಾರು ಸೊಂಕಿತರ ಪ್ರಾಣ ಉಳಿದಂತಾಗಿದೆ.
ಕೆಲವು ಸೊಂಕಿತರಿಗೆ ವೆಂಟಿಲೇಟರ್ ಆಳವಡಿಸಲಾಗಿದ್ದು ತಜ್ಞ ಸಿಬ್ಬಂದಿಗಳಿಲ್ಲದೆ ಅವುಗಳನ್ನು ಬಳಸುವ ರೀತಿಯಲ್ಲಿ ಸಿಬ್ಬಂದಿಗಳ ಅನುಭವದ ಕೊರತೆಯಿಂದಾಗಿ ಇಂದು ಸುಮಾರು ನಾಲ್ಕು ಜನ ಸೊಂಕಿತರು ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆಂದು ತಿಳಿದುಬಂದಿದೆ.
ತಹಶಿಲ್ದಾರ ಮಂಜುನಾಥ ಬೋಗಾವತಿ ,ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಹನುಮಂತ ರಡ್ಡಿ ,ಡಾ.ವಿರೇಶ ,ಆಸ್ಪತ್ರೆಯ ಆಡಳಿತಾಧಿಕಾರಿ ವಿಜಯ ಮಹಾಂತೇಶ , ಔಷಧಿ ವಿತರಕರಾದ ಶಶಿಧರ ,ಮರಿಸ್ವಾಮಿ ಸೇರಿದಂತೆ ಇತರ ಸಿಬ್ಬಂದಿಗಳು ಹಾಜರಿದ್ದರು.