ಆಸ್ಪತ್ರೆಯ ಸ್ಥಿತಿಗತಿ ನೋಡಿ ಮುಖ್ಯವೈದ್ಯಾಧಿಕಾರಿಗೆ ಕಟ್ಟೆಚ್ಚರಿಕೆ :ರಾಹುಲ್ ಸಿಂಧೆ

ಇಂಡಿ:ನ.8: ಪಟ್ಟಣದ ಸಾರ್ವಜನಿಕ ಸರ್ಕಾರಿ ಅಸ್ಪತ್ರೆ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಸಿಂಧೆ ದಿಢಿರ್ ಬೇಟಿ ನೀಡಿ ಆಸ್ಪತ್ರೆಯ ಸ್ಥಿತಿಗತಿ ನೋಡಿ ಮುಖ್ಯ ವೈಧ್ಯಾಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಕಟ್ಟೇಚರಿಕೆ ನೀಡಿದರು.

ಆಸ್ಪತ್ರೆಯ ಸ್ವಚ್ಛತೆ, ಉಪಹಾರ ಕೋಣೆ ಕಿಟಕಿ ಬಾಗಿಲು ವೀಕ್ಷಣೆ ಮಾಡಿದ ಅವರು ನೂತನವಾಗಿ ಲ್ಯಾಂಡ್ ಆರ್ಮಿ ನಿರ್ಮಿಸಿದ ಚಿಕ್ಕಮಕ್ಕಳ ವಾರ್ಡನ್ನು ವೀಕ್ಷಣೆ ಮಾಡಿದ ಅವರು ಸ್ಥಳದಲ್ಲಿ ಹಾಜರಿದ್ದ ಲ್ಯಾಂಡ್ ಆರ್ಮಿ ಅಧಿಕಾರಿ ಎ.ಇ.ಇ ರಾಜಶೇಖರ ಹೂಗಾರ ಇವರಿಗೆ ಕಟ್ಟಡ ವಸ್ತು ಸ್ಥಿತಿ, ಗುಣಮಟ್ಟ ಹಾಗೂ ಕಟ್ಟಡದ ಸೌಂದರ್ಯ ಕಂಡು ಅಧಿಕಾರಗಳು ಪ್ರಸಂಶಿಸಿದರು.

ಸಾರ್ವಜನಿಕರು ಆಸ್ಪತ್ರೆಗಳಿಗೆ ಸರಕಾರ ಸಾಕಷ್ಟು ಅನುಕೂಲ ಕಲ್ಪಸಿದೆ ಇಂತಹ ಸುಂದರವಾದ ಕಟ್ಟಡದಲ್ಲಿ ವೈದ್ಯರು ಸುಂದರ ಮನಸ್ಥಿತಿಯಿಂದ ಕೆಲಸ ಮಾಡಬೇಕು. ಕೇವಲ ಸೌಧ ನಿರ್ಮಾಣ ಮಾಡಿದರೆ ಸಾಲದು ಸಾರ್ವಜನಿಕರು ಸೇವೆ ದೇವರ ಸೇವೆ ಎಂಬ ಭವ ಅವರಲ್ಲಿರಬೇಕು. ಸ್ಥಳೀಯ ಆಸ್ಪತ್ರೆಯಲ್ಲಿ ಸಮಯಕ್ಕೆ ಸರಿಯಾಗಿ ವೈದ್ಯರು ಸಿಬಂದ್ದಿಗಳು ಕಾರ್ಯನಿರ್ವಸುತ್ತಲ್ಲ ಎಂಬ ಕೂಗು ಕೇಳಿಬಂದಿದೆ. ತಾಲೂಕ ಆಸ್ಪತ್ರೆ ಎಂದಾಕ್ಷಣ ಗ್ರಾಮೀಣ ಭಾಗದ ಜನರು ಬರುತ್ತಾರೆ ಅಂತಹ ಸಂದರ್ಭದಲ್ಲಿ ವೈದ್ಯರೆ ಇರುವುದಿಲ್ಲ ಎಂದರೆ ಹೇಗೆ? ಎಲ್ಲಾ ವೈದ್ಯರು ನಿಮ್ಮ ನಿಮ್ಮ ಪ್ರತ್ಯೇಕ ಕೊಠಡಿಗಳಲ್ಲಿ ಕುಳಿತು ರೋಗಿಗಳನ್ನು ಚಿಕಿತ್ಸೆ ನೀಡಬೇಕು ಒಟ್ಟಾಗಿ ಒಂದೇ ಕಡೆ ಕುಳಿತರೆ ರೋಗಿಗಳಿಗೆ ತೋಂದರೆಯಾಗುತ್ತದೆ. ವೈದ್ಯಕೀಯ ಸೇವೆಗೆ ಬೇಕಾದ ಎನಾದರೂ ತೊಂದರೆ ಇದ್ದರೆ ಮುಕ್ತವಾಗಿ ಹೇಳಿ ಸರಿಪಡಿಸುತ್ತೆನೆ. ಡಯಾಲಿಸ್ ಕೇಂದ್ರಕ್ಕೆ ಬೇಟಿ ನೀಡಿ 24 ಗಂಟೆಗೆ ಕಾರ್ಯನಿರ್ವಹಿಸಲು ತಿಳಿಸಿದರು. ಇದೆ ವೇಳೆ ಹೆರಿಗೆ ವಾರ್ಡಗೆ ಬೇಟಿ ನೀಡಿ ಅಲ್ಲಿನ ವಾಸ್ತವಿಕ ಸ್ಥಿತಿಗತಿ ನೋಡಿ ಸ್ವಚ್ಛತೆ ಇರಬೇಕು ದಿನದಲ್ಲಿ ಎರಡು ಭಾರಿ ಫೀನಾಯಿಲ್ ಹಾಕಿ ವಾರ್ಡ ಸ್ವಚ್ಛ ಇಡಬೇಕು ಎಂದು ತಾಕೀತು ಮಾಡಿದರು ಈ ಸಂದರ್ಭದಲ್ಲಿ ಸಾರ್ವಜನಿಕರೊಬ್ಬರು ಹೆರಿಗೆಗೆ ಬಂದ ಜನರಿಂದ ಹಣ ಕೀಳುತ್ತಾರೆ ಎಂದು ಹೇಳಿದ್ದಾಗ ಕೆಂಡಮಂಡಲವಾದ ಸಿ.ಇಓ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು ಇಂತಹ ಅಚಾರ್ತು ಇನ್ನೊಮ್ಮೆ ನಡೆದರೆ ಶಿಸ್ತುಕ್ರಮ ಜರುಗಿಸುವುದಾಗಿ ತಿಳಿಸಿದರು.

ಬಾಕ್ಸ: ತಾಲೂಕಾ ಮಟ್ಟದ ಅಧಿಕಾರಿಗಳ ಹಾಗೂ ಗ್ರಾ.ಪಂ ಅಭಿವೃದ್ದಿ ಅಧಿಕಾರಿಗಳ ಸಭೆಯಲ್ಲಿ ಉದ್ದೇಶಿಸಿ ಮಾತನಾಡಿ ಸರಕಾರಿ ಶಾಲೆಗಳ ಮೇಲೆ ವಿದ್ಯುತ ತಂತಿಗಳು ಹಾಯ್ದು ಹೋಗಿದ್ದರೆ ಬೇಗನೆ ಬೇರೆ ಕಡೆ ಸ್ಥಳಾಂತರಿಸಿ ಎಂದು ತಾಕೀತು ಮಾಡಿದರು .ತಾಲೂಕಿನಾದ್ಯೆಂತ ಯಾವ ಶಾಲೆಗಳ ಮೇಲ್ಭಾಗ ಹಾದು ಹೋಗಿವೆ ಪಿ.ಡಿ.ಓಗಳು ಕೂಡಲೆ ಸರ್ವೆ ಮಾಡಿ ವರದಿ ನೀಡುವಂತೆ ತಿಳಿಸಿದರು. ಗಂಗಾ ಕಲ್ಯಾಣ ಯೋಜನೆಗಳು ಎಷ್ಟು ಇನ್ನು ಬಾಕಿ ಇವೆ ಎಂದು ಪ್ರಶ್ನಿಸಿದರು ಇದಕ್ಕೆ ಉತ್ತರಿಸಿದ ಹೆಸ್ಕಾಂ ಅಧಿಕಾರಿ 28 ಬಕಿ ಉಳಿದಿರುವ ಬಗ್ಗೆ ಮಾಹಿತಿ ನೀಡಿದರು. ವಿದ್ಯುತ ಬಿ.ಸಿ ಎಂ ವಸತಿ ನಿಲಯಗಳ ಪರಸ್ಥಿತಿ ಏನು? ಸಮಪರ್ಕ ಕಾರ್ಯನಿರ್ವಹಿಸುತ್ತಿವೆಯೇ ಎಂದು ಕೇಳಿದಾಗ ಸರಿಯಾಗಿ ನಡೇದಿವೆ ಎಂದರು. ನಂತರ ಕೃಷಿ ,ತೋಟಗಾರಿಕೆ ಇಲಾಖೆಗಳ ಬಗ್ಗೆ ವಿಚಾರಿಸಿದರು.

ತಾ.ಪಂ ಅಧಿಕಾರಿ ಸುನೀಲ ಮದ್ದಿನ, ಚಡಚಣ ತಾ.ಪಂ ಅಧಿಕಾರಿ ಸಂಜೇಯ ಖಡಗೇಕರ್, ತಾಲೂಕ ವೈದ್ಯಾಧಿಕಾರಿ ಅರ್ಚನಾ ಕುಲಕರ್ಣಿ, ಡಾ. ರಾಜಶೇಖರ ಕೋಳೆಕರ್, ಲ್ಯಾಂಡ್ ಆರ್ಮಿ ಅಧಿಕಾರಿ ರಾಜಸೇಖರ ಹೂಗಾರ, ನೇತ್ರ ತಜ್ಞ ಡಾ. ಬಿರಾದಾರ, ಕಾಂಗ್ರೆಸ್ ಮುಖಂಡ ಪ್ರಶಾಂತ ಕಾಳೆ, ಅವಿನಾಶ ಬಗಲಿ ಇದ್ದರು.