ಆಸ್ಪತ್ರೆಯ ನೌಕರರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ

ಹರಿಹರ ಮೇ 26; ವೈರಸ್ ಎರಡನೇ ಹಂತದ ಅಲೆಗೆ ಬಡ ಮಧ್ಯಮ ವರ್ಗದ ನಿರ್ಗತಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಆಸ್ಪತ್ರೆಯಲ್ಲಿ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ವೈದ್ಯ ಸಿಬ್ಬಂದಿಗಳು ಸಾರ್ವಜನಿಕರ ಆರೋಗ್ಯ ಹಿತ ಕಾಪಾಡುವುದಕ್ಕೆ ಮುಂದಾಗಿದ್ದಾರೆ ಇಂಥ ಸಂದರ್ಭದಲ್ಲಿ ಸಂತ ಅಲೋಶಿಯಸ್ ಕಾಲೇಜಿನ ಮುಖ್ಯಸ್ಥರು ಆಡಳಿತ ಮಂಡಳಿಯವರು ನೊಂದವರಿಗೆ ನೆರವಾಗುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಶಾಸಕ ಎಸ್ ರಾಮಪ್ಪ ಹೇಳಿದರು 
ಸಾರ್ವಜನಿಕ ಆವರಣದಲ್ಲಿ  ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಆಂಬ್ಯುಲೆನ್ಸ್ ಚಾಲಕರಿಗೆ ಮತ್ತು ಇತರೆ ಸಿಬ್ಬಂದಿಗಳಿಗೆ ಆಹಾರ ಧಾನ್ಯದ ಕಿಟ್ಟ ಗಳನ್ನು ನೀಡಿ ಮಾತನಾಡಿದ ಅವರು  ಕಳೆದ ವರ್ಷದಿಂದ  ವೈರಸ್ ನಿಂದ ಸಂಕಷ್ಟಕ್ಕೆ ಸಿಲುಕಿದ ಕುಟುಂಬ ವರ್ಗದವರಿಗೆ  ದಿನಬಳಕೆ ಆಹಾರ ಪದಾರ್ಥಗಳನ್ನು ನೀಡುತ್ತಾ ಬಡ ಮಧ್ಯಮ ವರ್ಗದ ನಿರ್ಗತಿಕರಿಗೆ ಸಹಾಯ ಹಸ್ತ ಚಾಚುವ ಕಾರ್ಯಕ್ಕೆ ಮುಂದಾಗಿದ್ದಾರೆ  ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಸಾಕಷ್ಟು ಬೀದಿಯಲ್ಲಿ ಗುಡಿಸಿಲಿನಲ್ಲಿ ಹಾಗೂ ಆಟೊ ಚಾಲಕರಿಗೆ ಇತರರಿಗೆ ಮತ್ತು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ದಿನಸಿ ಕೆಟ್ಟ ಗಳನ್ನು ನೀಡಿ ಅವರಿಗೆ ಆಸರೆಯಾಗುತ್ತಿದ್ದಾರೆ ಇವರ ಕಾರ್ಯ ಹೀಗೆ ಮುಂದುವರಿಯಲಿ ಹಾರೈಸಿ ಶ್ಲಾಘನೀಯ ವ್ಯಕ್ತಪಡಿಸಿದರು ಸಂತ ಅಲೋಶಿಯಸ್ ಕಾಲೇಜಿನ ನಿರ್ದೇಶಕರಾದ ರಾಯಪ್ಪ ಫಾದರ್ ಮಾತನಾಡಿ ನಮ್ಮ ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಅಧ್ಯಾಪಕ ವರ್ಗ,   ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು  ವೈರಸ್ ನಿಂದ ನಲುಗಿಹೋದವರ ತುತ್ತು ಅನ್ನಕ್ಕೆ ಪರದಾಡುವಂಥ ಕುಟುಂಬದವರನ್ನು ಗುರುತಿಸಿ ಅಂಥವರಿಗೆ ನರ ನೆರವಾಗುವಂಥ ಕಾರ್ಯವನ್ನು ಮಾಡುತ್ತಿದ್ದಾರೆ ಎಂದರು.ಆಸ್ಪತ್ರೆಯ ಆಡಳಿತ ಮುಖ್ಯ ವೈದ್ಯಾಧಿಕಾರಿ ಎಲ್ ಹನುಮನಾಯ್ಕ್ .ಕಾರ್ಮಿಕ ಮುಖಂಡ ಎಚ್ ಕೆ ಕೊಟ್ರಪ್ಪ.  ಸಂಘದ ಕಾರ್ಯದರ್ಶಿ ಎನ್  ಸುರೇಶ್ ಸ್ವಾಮಿ  .ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ಮಂಜುನಾಥ್ ಎಚ್ .ಕಾಲೇಜಿನ ಪ್ರಾಂಶುಪಾಲರಾದ ಸನ್ನಿ ಗುಡಿನೋ .ದೈಹಿಕ ಶಿಕ್ಷಕರಾದ ಮಂಜುನಾಥ್.ಶಾಸಕರ ಆಪ್ತ ಕಾರ್ಯದರ್ಶಿ ಗಳಾದ ಹನುಮಂತಪ್ಪ .ವಿಜಯಮಾಂತೇಶ . ನರ್ಸಿಂಗ್ ಅಧಿಕಾರಿಗಳಾದ ಶೋಭಾ ದೊಡ್ಡಮನಿ .ಕಾಲೇಜಿನ ಶಿಕ್ಷಕ ವೃಂದದವರು ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಇತರರು ಇದ್ದರು