ಆಸ್ಪತ್ರೆಯಿಂದ ನಟ ಶಾರುಖ್ ಬಿಡುಗಡೆ

ಅಹಮದಾಬಾದ್,ಮೇ.೨೪-ಶಾರುಖ್ ಖಾನ್ ಅಭಿಮಾನಿಗಳಿಗೊಂದು ಸಂತಸದ ಸುದ್ದಿ. ಕಿಂಗ್ ಖಾನ್ ಅವರನ್ನು ಅಹಮದಾಬಾದ್‌ನ ಕೆಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಶಾರುಖ್ ಅವರ ಮ್ಯಾನೇಜರ್ ಪೂಜಾ ದದ್ಲಾನಿ, ನಟನ ಆರೋಗ್ಯ ಕುರಿತು ಮಾಹಿತಿ ಬಿಡುಗಡೆ ಮಾಡುವಾಗ, ಕಿಂಗ್ ಖಾನ್ ಅವರ ಆರೋಗ್ಯ ಈಗ ಉತ್ತಮವಾಗಿದೆ ಎಂದು ಹೇಳಿದ್ದಾರೆ. ಇದರ ನಂತರವೇ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ, ನಂತರ ಅವರು ನೇರವಾಗಿ ಅಹಮದಾಬಾದ್‌ನಿಂದ ಮುಂಬೈಗೆ ಪ್ರಯಾಣ ಬೆಳೆಸಿ ಭಾರೀ ಭದ್ರತೆ ನಡುವೆ ತಮ್ಮ ಬಂಗಲೆ ಮನ್ನತ್‌ಗೆ ತಲುಪಿದ್ದಾರೆ.
ಶಾರುಖ್ ಖಾನ್ ಖಾಸಗಿ ಚಾರ್ಟರ್ಡ್ ವಿಮಾನದಲ್ಲಿ ಅಹಮದಾಬಾದ್‌ನಿಂದ ಮುಂಬೈಗೆ ಮರಳಿದ್ದಾರೆ. ಶಾರುಖ್ ಹೀಟ್ ಸ್ಟ್ರೋಕ್ ಮತ್ತು ನಿರ್ಜಲೀಕರಣದ ನಂತರ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ಸಂಜೆ ಅವರು ಅಹಮದಾಬಾದ್‌ನಿಂದ ಮುಂಬೈ ತಲುಪಿದ್ದಾರೆ.
ಶಾರುಖ್ ಹೀಟ್ ಸ್ಟ್ರೋಕ್ ಮತ್ತು ನಿರ್ಜಲೀಕರಣದ ಕಾರಣದಿಂದಾಗಿ ದಾಖಲಾಗಿದ್ದರಿಂದ, ಸೂರ್ಯನ ಕಿರಣಗಳಿಂದ ಸೂಪರ್‌ಸ್ಟಾರ್ ಅವರನ್ನು ರಕ್ಷಿಸಲು ಸಾಕಷ್ಟು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅಷ್ಟರಲ್ಲಿ ಒಬ್ಬ ವ್ಯಕ್ತಿ ಕೊಡೆ ಹಿಡಿದುಕೊಂಡಿದ್ದು ಕಾಣಿಸಿದೆ. ಅವರ ಜೊತೆ ಪತ್ನಿ ಗೌರಿ ಕೂಡ ಕಾಣಿಸಿಕೊಂಡಿದ್ದಾರೆ.
ಅವರ ಮ್ಯಾನೇಜರ್ ಪೂಜಾ ದದ್ಲಾನಿ ಮಾಹಿತಿ ನೀಡಿದ್ದಾರೆ. ಕಿಂಗ್ ಖಾನ್ ಅವರ ಮ್ಯಾನೇಜರ್ ಪೋಸ್ಟ್ ಹಂಚಿಕೊಂಡಿದ್ದಾರೆ ಮತ್ತು ಶಾರುಖ್ ಅವರ ಆರೋಗ್ಯ ಈಗ ಮೊದಲಿಗಿಂತ ಉತ್ತಮವಾಗಿದೆ ಎಂದು ಬರೆದಿದ್ದಾರೆ. ಪೂಜಾ ಬರೆದಿದ್ದಾರೆ- ಶ್ರೀ ಖಾನ್ ಅವರ ಆರೋಗ್ಯವು ಮೊದಲಿಗಿಂತ ಉತ್ತಮವಾಗಿದೆ. ನಾನು ಅವರ ಎಲ್ಲಾ ಹಿತೈಷಿಗಳು ಮತ್ತು ಅಭಿಮಾನಿಗಳಿಗೆ ಹೇಳಲು ಬಯಸುತ್ತೇನೆ. ನಿಮ್ಮೆಲ್ಲರ ಪ್ರೀತಿ, ಪ್ರಾರ್ಥನೆ ಮತ್ತು ಕಾಳಜಿಗೆ ಧನ್ಯವಾದಗಳು ಎಂದಿದ್ದಾರೆ.