ಆಸ್ಪತ್ರೆಯಲ್ಲಿ ರೋಗಿಗಳ ಆರೋಗ್ಯ ವಿಚಾರಿಸಿದ ವಿದ್ಯಾರ್ಥಿಗಳುಹಣ್ಣು-ಹಂಪಲು ವಿತರಣೆ

ಬೀದರ:ಫೆ.22: ಗುರು ನಾನಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ|| ರೇಷ್ಮಾ ಕೌರ್ ಅವರ ಹುಟ್ಟು ಹಬ್ಬ ನೇಹರು ಸ್ಟೇಡಿಯಂ ಹತ್ತಿರವಿರುವ ಗುರು ನಾನಕ ಪಬ್ಲಿಕ್ ಶಾಲೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ನಿಮಿತ್ಯ ಗುರು ನಾನಕ ಶಾಲೆ ಮನ್ನಾಎಖೇಳ್ಳಿಯ ವಿದ್ಯಾರ್ಥಿಗಳು ಮನ್ನಾಎಖೇಳ್ಳಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಭೇಟಿಕೊಟ್ಟು ಒಳರೋಗಿಗಳಿಗೆ ಆರೋಗ್ಯ ವಿಚಾರಿಸಿ ಶಾಲೆಯ ಮಕ್ಕಳು ಮತ್ತು ಸಿಬ್ಬಂದಿಯವರು ಹಣ್ಣು-ಹಂಪಲು ಮತ್ತು ಬ್ರೇಡ್-ಬಿಸ್ಕೇಟ್ ವಿತರಿಸಿದರು. ಅದೇ ರೀತಿ ಕೊಳಚೆ ಪ್ರದೇಶದಲ್ಲಿ ಮನೆ-ಮನೆಗೆ ತೆರಳಿ ಬಡ ಮಕ್ಕಳು ಮತ್ತು ವೃದ್ದರೊಂದಿಗೆ ವಿದ್ಯಾರ್ಥಿಗಳು ಆರೋಗ್ಯವನ್ನು ವಿಚಾರಿಸಿ ಅವರಿಗೂ ಕೂಡಾ ಹಣ್ಣು-ಹಂಪಲು ವಿತರಿಸುವ ಮೂಲಕ ಮನುಕುಲದ ಸೇವೆಯೇ ದೇವರ ಸೇವೆ ಎಂಬ ಧ್ಯೇಯವಾಕ್ಯದೊಂದಿಗೆ ತಮ್ಮ ಶುದ್ಧ ಪ್ರೀತಿಯನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಶ್ರೀ ಇನಾಯತ್‍ಪಾಶಾ ಅವರು ಮಾತನಾಡಿ ಈ ಸಂದರ್ಭ ನಮಗೆ ಅತೀವ ಆನಂದ ನೀಡಿದೆ. ಬಡವರ ಮತ್ತು ವೃದ್ಧರ ಹಸಿವು ನೀಗಿಸುವ ನಿಟ್ಟಿನಲ್ಲಿ ಒಂದು ಪುಟ್ಟ ಹೆಜ್ಜೆಯಾಗಿ ಈ ರೀತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ವಿನಮ್ರವಾಗಿ ನುಡಿದರು.