ಆಸ್ಪತ್ರೆಯಲ್ಲಿ ಆಕಸ್ಮಿಕ ಬೆಂಕಿ: 10 ರೋಗಿಗಳು ಸಜೀವ ದಹನ, ತಲಾ 5 ಲಕ್ಷ ಪರಿಹಾರ ಪ್ರಕಟ

ಭೋಪಾಲ್,ಆ.1- ಮಧ್ಯಪ್ರದೇಶದ ಜಬಲ್ಪುರ್ ಖಾಸಗಿ ಆಸ್ಪತ್ರೆಯಲ್ಲಿ ಶಾರ್ಟ್ ಸರ್ಕೂಟ್ ನಿಂದ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ಕನಿಷ್ಠ ಹತ್ತು ರೋಗಿಗಳು ಸಜೀವ ದಹನವಾಗಿರುವ ಧಾರುಣ ಘಟನೆ ದುರಂತ ಸಂಭವಿಸಿದೆ.ಘಟನೆಯಲ್ಲಿ ಹಲವು ರೋಗಿಗಳು ಗಂಭೀರವಾಗಿ ಗಾಯಗೊಂಡಿದ್ದು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಾವಿನ ಸಂಖ್ಯೆ ಹೆಚ್ಚುವ ಸಾದ್ಯತೆ ಇದೆ ಎನ್ನಲಾಗಿದೆ‌ ಬೆಂಕಿ ಕಾಣಿಸಿಕೊಂಡ ತಕ್ಷಣ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವ ವೇಳೆಗೆ ಹಲವು ಮಂದಿ ರೋಗಿಗಳು ಮೃತಪಟ್ಟಿದ್ದರು. ಖಾಸಗಿ ಆಸ್ಪತ್ರೆ ಒಳಗೆ ಸಿಲುಕಿದ ಹಲವು ರೋಗಿಗಳ ರಕ್ಷಣೆ ಮಾಡಲಾಗಿದೆ ಎಂದು ಅಗ್ನಿ ಶಾಮಕ ದಳದ ಹಿರಿಯ ಅಧಿಕಾರಿ ಅಖಿಲೇಶ್ ಗೊವರ್ ತಿಳಿಸಿದ್ದಾರೆ.ಮಲ್ಟಿ ಸ್ಪಷಾಲಿಟಿ ಆಸ್ಪತ್ರೆಯಲ್ಲಿ ಶಾರ್ಟ್ ಸರ್ಕೂಟ್ ಕಾಣಿಸಿಕೊಳ್ಳಲು ಕಾರಣ ತಿಳಿದು ಬಂದಿಲ್ಲ. ಸದ್ಯ ಅಪಾಯದಲ್ಲಿರುವ ಮಂದಿಯನ್ನು ರಕ್ಷಣೆ ಮಾಡುವುದಷ್ಟೇ ನಮ್ಮ ಕೆಲಸ ಎಂದು ಹೇಳಿದ್ದಾರೆ.ಗಂಬೀರವಾಗಿ ಗಾಯಗೊಂಡ ಇಬ್ಬರನ್ನು‌ ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಲ್ಲದೆ ಆಸ್ಪತ್ರೆಯ ಇನ್ನಿತರೆ ರೋಗಿಗಳನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ.

ತಲಾ 5 ಲಕ್ಷ ಪರಿಹಾರ

ಆಸ್ಪತ್ರೆಯಲ್ಲಿ ಅಗ್ನಿ ಅವಘಢದಿಂದ ಮೃತಪಟ್ಟ ಎಲ್ಲಾ ಮಂದಿಯ ಕುಟುಂಬದ ಸಂಬಂಧಿಕರಿಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾಣ್ ತಲಾ 5 ಲಕ್ಷ ಪರಿಹಾರ ಪ್ರಕಟಿಸಿದ್ದಾರೆ.ಮೃತಪಟ್ಟ ಎಲ್ಲಾ ಮಂದಿಗೆ ಮುಖ್ಯಮಂತ್ರಿಗಳು ತೀವ್ರ ಸಂತಾಪ‌ ವ್ಯಕ್ತಪಡಿಸಿದ್ದು ಗಾಯಾಳು ರೋಗಿಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.