ಆಸ್ಪತ್ರೆಯಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ ನೀಗಿಸುವಂತೆ ಜಿಲ್ಲಾಧಿಕಾರಿಗೆ ಕರವೇ ಮನವಿ


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಜ. 11 :- ತಾಲೂಕಿನ ಗುಡೇಕೋಟೆ   ಪ್ರಾಥಮಿಕ ಆರೋಗ್ಯ  ಕೇಂದ್ರದಲ್ಲಿ ವೈದ್ಯರ ಕೊರತೆ ಸೇರಿದಂತೆ ಇತರೆ ಮೂಲಭೂತ ಸಮಸ್ಯೆಗಳು ಎದ್ದು  ಕಾಣುತ್ತಿದ್ದು ಅದನ್ನು ಸರಿಪಡಿಸುವಂತೆ ಗುಡೇಕೋಟೆ ಹೋಬಳಿ ಕರ್ನಾಟಕ ರಕ್ಷಣಾ ವೇದಿಕೆ ಘಟಕದ ಅಧ್ಯಕ್ಷ ಜೆ.ಶಿವಕುಮಾರ ನೇತೃತ್ವದಲ್ಲಿ ಸೋಮವಾರ ಕೂಡ್ಲಿಗಿ ಆರೋಗ್ಯ ಇಲಾಖೆ ಮುಖೇನಾ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಗುಡೇಕೋಟೆ ತಾಲೂಕಿನ ಹೋಬಳಿ ಕೇಂದ್ರವಾಗಿದ್ದು ಸುತ್ತಮುತ್ತಲಿನ ಅನೇಕ ಗ್ರಾಮಗಳಿಗೆ ಈ ಆರೋಗ್ಯ ಕೇಂದ್ರ ಆಸರೆಯಾಗಿದ್ದು ಏಷ್ಯಾ ಖಂಡದ ಎರಡನೇ ಅತಿದೊಡ್ಡ ಕರಡಿಧಾಮ ಸಹ ಇದ್ದು ಕಾಡುಪ್ರಾಣಿಗಳ ದಾಳಿ ಅಥವಾ ಯಾವುದೇ ಅನಾರೋಗ್ಯ, ಅಪಘಾತ, ಹೆರಿಗೆ ಇತರೆ ಸಂಬಂಧಿಸಿದಂತೆ ಸಂಜೆ ನಂತರ ಆಸ್ಪತ್ರೆಗೆ ಬಂದರೆ ಸಮಯಕ್ಕೆ ಸರಿಯಾಗಿ ವೈದ್ಯರಿಲ್ಲದೆ ಮತ್ತು ಕೇಂದ್ರ ಸ್ಥಾನದಲ್ಲಿ ವಾಸಮಾಡದೆ ಇರುವುದು ಮತ್ತು  ಸಿಬ್ಬಂದಿಗಳ ನಿರ್ಲಕ್ಷ್ಯ ತೋರುತ್ತಿರುವುದು ಅಲ್ಲದೆ ಆಸ್ಪತ್ರೆಯ ಆವರಣದಲ್ಲಿ ಸ್ವಚ್ಛತೆ ಇಲ್ಲಾ, ನೀರಿನ ಕೊರತೆ,  ಶೌಚಾಲಯ ಕೊರತೆ, ವಿದ್ಯುತ್ ಸಮಸ್ಯೆ  ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದ್ದು ಇದನ್ನು ಸರಿಪಡಿಸುವಂತೆ ಅನೇಕ ಬಾರಿ ಆರೋಗ್ಯ ಇಲಾಖೆಗೆ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ ಇದರಿಂದಾಗಿ ಸಾರ್ವಜನಿಕವಲಯದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೂಲಭೂತ ಸೌಕರ್ಯ ಒದಗಿಸುವಂತೆ ಸಾರ್ವಜನಿಕರ ಪರವಾಗಿ ಕರ್ನಾಟಕ ರಕ್ಷಣಾ ವೇದಿಕೆ ಮನವಿ ಮಾಡುತ್ತಿದೆ ಎಂದು ಜೆ ಶಿವಕುಮಾರ್ ತಿಳಿಸಿದರು. ಹಾಗೂ ಕರವೇ ತಾಲೂಕು ಅಧ್ಯಕ್ಷ ಕಾಟೇರ ಹಾಲೇಶ್ ಮಾತನಾಡಿ ಈ ಸಮಸ್ಯೆ ಪರಿಹರಿಸದಿದ್ದಲ್ಲಿ ಮುಂದಿನ ದಿನದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುವದು ಎಂದು ಎಚ್ಚರಿಕೆ ನೀಡಿದರು.
ಕೂಡ್ಲಿಗಿ ತಾಲೂಕು ಆರೋಗ್ಯ ಇಲಾಖೆಯ ಎಸ್ ಡಿ ಎ ನಾಗೇಶ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಗುಡೆಕೋಟೆ ಶ್ರೀನಿವಾಸ್. ಎಸ್ ಕುಬೇರ. ಎಂ ಹುಲಿರಾಜ್,  ಬೇಕರಿ ಸುರೇಶ್. ಸೂರ್ಯನಾರಾಯಣ. ಬಿ.ಎಸ್ ಉಮೇಶ್. ಹೊನ್ನೂರಪ್ಪ. ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ್ ಘಟಕದ ಅಧ್ಯಕ್ಷರಾದ ಕಾಟೇರ ಹಾಲೇಶ್. ತಾಲೂಕು  ಯುವ ಘಟಕದ ಅಧ್ಯಕ್ಷರಾದ ಓಬಳೇಶ್. ಇನ್ನು ಮುಂತಾದವರು ಉಪಸ್ಥಿತರಿದ್ದರು.