ಆಸ್ಪತ್ರೆಯಲ್ಲಿನ ಚಿಕಿತ್ಸೆಯ ಪರಿಶೀಲನೆ

ಮುದ್ದೇಬಿಹಾಳ:ಎ.27: ಪಟ್ಟಣದ ಇಲ್ಲಿನ ತಾಲೂಕಾ ಸರಕಾರಿ ಆಸ್ಪತ್ರೆಗೆ ಬಿಜೆಪಿ ತಾಲೂಕಾ ಮಂಡಲದ ಅಧ್ಯಕ್ಷ ಪರುಶುರಾಮ ಪವಾರ ಬೇಟಿ ನೀಡಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ಮತ್ತು ಸಾಮಾನ್ಯ ರೋಗಿಗಳಿಗೆ ಹೇಗೆಲ್ಲ ಚಿಕಿತ್ಸೆ ನೀಡಲಾಗುತ್ತಿದೆ ಎಂಬುದನ್ನು ಸೋಮವಾರ ಪರಿಶಿಲನೇ ನಡೆಸಿದರು.

ಈ ವೇಳೆ ಅರವಳಿಕೆ ತಜ್ಞ ಅನೀಲ ಶೇಗುಣಸಿ ಅವರನ್ನು ಬೇಟಿ ಮಾಡಿ ಈಗಾಗಲೇ ಜಿಲ್ಲೇ ಸೇರಿದಂತೆ ತಾಲೂಕಿನಲ್ಲೆಡೆ ಬಾರಿ ವ್ಯಾಕಪವಾಗಿ ಕೋವಿಡ್ ಸೊಂಕಿತರು ಹೆಚ್ಚಾಗುತ್ತಿದ್ದಾರೆ. ಅವರಿಗೇಲ್ಲ ಹೇಗೆಲ್ಲ ಚಿಕಿತ್ಸೆ ನೀಡಲಾಗುವುತ್ತಿದೆ, ಮತ್ತು ಸರಿಯಾಗಿ ಆಹಾರ ನೀಡುತ್ತಿಲ್ಲ ಎಂಬ ಆಶರೋಪಗಳು ಕೇಳಿ ಬರುತ್ತಿವೆ ಅದು ನಿಜನಾ ಎಂದು ಪ್ರಶ್ನೀಸಿದರು.

ವೈದ್ಯ ಅನೀಲ ಶೇಗುಣಸಿ ಅವರು ಮಾತನಾಡಿ ಈಗಾಗಲೇ ಸಾಮಾನ್ಯ ರೋಗಿಗಳಿಗೆ ಮತ್ತು ತುರ್ತ ಆರೋಗ್ಯ ಸೇವೆ ಯಥಾಸ್ಥಿಯಿಲ್ಲಿ ಮುಂದುವರೆಸಲಾಗಿದೆ ಯಾವೂದೇ ತೊಂದರೆಯಾಗಿಲ್ಲ. ಅದರಂತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುವ ರೋಗಿಗಳಿಗೆ ಗುಣಮಟ್ಟದ ಚಹಾ ಹಾಗೂ ಪತ್ತೆ ಊಟ ಉಪಹಾರ ನೀಡಲಾಗುತ್ತಿದೆ.

ಅದರಂತೆ ಕೋವಿಡ್ ಸೊಂಕಿತರಿಗಾಗಿ ಪ್ರತ್ಯೇಕ 28 ಬೆಡ್ ಗಳುಳ್ಳ ಕೋಠಡಿ ತೆರೆಯಲಾಗಿದೆ, ತುಂಬಾ ಗಂಭೀರ ಸ್ಥಿಯಲ್ಲಿರುವವರಿಗೆ ಐಸೋಲೇಷನ್, ವೆಂಟಿಲೇಟರ್ ಸೇರಿದಂತೆ ಔಷಧೋಪಚಾರ ಒದಗಿಸಲಾಗುತ್ತಿದೆ.

ಸರಕಾರಿ ಆಸ್ಪತ್ರೆ ರೋಗಿಗಳಿಗೆ ಆಹಾರ ಪೂರೈಸಲು ಗುತ್ತಿಗೆ ನೀಡಲಾಗಿದೆ ಅವರೇ ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕತ್ಸೆ ಪಡೆದುಳ್ಳುವ ಸೊಂಕಿತರಿಗೂ ಒಳ್ಳೆಯಯ ರೀತಿಯಲ್ಲಿ ಅವರ ಆರೋಗ್ಯದ ಮೇಲೇ ಯಾವೂದೇ ತೊಂದರೆಯಾಗದಂತೆ ನೀಗಾವಹಿಸಿದಲ್ಲದೇ ಸರಕಾರದ ನಿರ್ದೇಶನದಂತೆ ನಿತ್ಯ ಸಮಯಕ್ಕೆ ಸರಿಯಾಗಿ ಊಟ ಉಪಹಾರ ನೋಡಲಾಗುತ್ತಿದೆ.

ಕೆಲವರು ವಿನಾ ಕಾರಣ ತೊಂದರೆ ಕೋಡುತ್ತಿದ್ದಾರೆ ಇದರಿಂದಾಗಿ ಯೋಗ್ಯ ತಜ್ಞ ವೈದ್ಯರು ಇಲ್ಲಿ ಕರ್ತವ್ಯ ನಿರ್ವಹಿಸಲು ಇಷ್ಟ ಪಡುತ್ತಿಲ್ಲ. ಸಧ್ಯಕ್ಕಂತೂ ಚಿಕಿತ್ಸೆಗೆ ಕೋಡುವಲ್ಲಿ ಯಾವೂದೇ ತೊಂದರೆ ಇಲ್ಲ. ಆದರೂ ಇನ್ನು ನಮ್ಮ ಸರಕಾರಿ ಆಸ್ಪತ್ರೆಗೆ ಇನ್ನಷ್ಟು ತಜ್ಞ ವೈದ್ಯರ ಅವಶ್ಯವಿದೆ ಎಂದರು.

ಈ ಸಂದರ್ಭದಲ್ಲಿ ಯುವ ಮುಖಂಡ ಪುನಿತ್ ಹಿಪ್ಪರಗಿ ಮಂಜು ರತ್ನಾಕರ, ಬಸಯ್ಯಾ ನಂದಿಕೇಶ್ವರಮಠ ಸೇರಿದಂತೆ ಹಲವರು ಇದ್ದರು.