ಆಸ್ಪತ್ರೆಗೆ 55 ಲಕ್ಷ ವೆಚ್ಚದ ಲ್ಯಾಬ್ ನಿರ್ಮಾಣಕ್ಕೆ ಶಾಸಕ ಗುತ್ತೇದಾರ ಅಡಿಗಲ್ಲು

??

ಆಳಂದ:ಫೆ.28: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 55 ಲಕ್ಷ ರೂಪಾಯಿ ವೆಚ್ಚದಲ್ಲಿ ವಿವಿಧ ಮಾದರಿ ರಕ್ತ ಪರೀಕ್ಷಾ ಕೇಂದ್ರ (ಲ್ಯಾಬ್), ಕಟ್ಟಡ ನಿರ್ಮಾಣಕ್ಕೆ ಶಾಸಕ ಸುಭಾಷ ಗುತ್ತೇದಾರ ಅವರು ಸೋಮವಾರ ಭೂಮಿ ಪೂಜೆ ನೆರವೇರಿಸಿದರು.

ಬಳಿಕ ಆಸ್ಪತ್ರೆ ಆಡಳಿತ ಮಂಡಳಿ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರು, ಪಟ್ಟಣ ಸೇರಿ ಗ್ರಾಮೀಣ ಭಾಗÀದಿಂದ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ನೂರಾರು ರೋಗಿಗಳಿಗೆ ನಿತ್ಯ ತಪಾಸಣೆ ಮತ್ತು ಚಿಕಿತ್ಸೆಯನ್ನು ಆಡಳಿತಾಧಿಕಾರಿ ಮಹಾಂತಪ್ಪ ಹಾಳಮಳಿ ಅವರ ನೇತೃತ್ವದಲ್ಲಿ ಉತ್ತಮರೀತಿಯಿಂದ ಕೆಲಸ ನಿರ್ವಹಿಸುತ್ತಿದ್ದು, ಅವರ ಬೇಡಿಕೆಯಂತೆ ರೋಗಿಗಳಿಗೆ ಅನುಕೂಲ ಕಲ್ಪಿಸಲು ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಅಲ್ಲದೆ, ಲಾಭ ಸ್ಥಾಪನೆಯಿಂದ ಎಲ್ಲ ರೀತಿಯ ರೋಗದ ಮಾದರಿ ಪರೀಕ್ಷೆಯ ಅನುಕೂಲವಾಗಲಿದೆ. ಈಗಾಗಲೇ ವೈದ್ಯರು ಕೇಳಿದಂತೆ ಡಯಾಲಿಸಸ್ ಕೇಂದ್ರಕ್ಕೆ ಪ್ರಸ್ತಾವನೆ ಕೋರಿದ್ದು, ಶೀಘ್ರವೇ ಮಂಜುರಾಗಲಿದೆ ಜೊತೆಗೆ ಆಸ್ಪತ್ರೆ ಆವರಣದಲ್ಲಿ ಪಾರ್ಕಿಂಗ ವ್ಯವಸ್ಥೆಯ ಬೇಡಿಕೆಯೂ ಅನುದಾನವಿಟ್ಟು ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಮಹಾಂತಪ್ಪ ಹಾಳಮಳಿ ಪ್ರಸ್ತಾವಿಕ ಮಾತನಾಡಿ, ನೂರಾಐವತ್ತು ಹಾಸಿಗೆಯುಳ್ಳ ಆಸ್ಪತ್ರೆಯ ಸುವ್ಯವಸ್ಥೆಗೆ ಶಾಸಕರು ಅಗತ್ಯ ಸೌಲಭ್ಯಗಳನ್ನು ಒದಗಿಸುವ ಜೊತೆಗೆ ವಿವಿಧ ಮಾದರಿಯ ರಕ್ತ ಪರೀಕ್ಷೆ ಕೇಂದ್ರ (ಲ್ಯಾಬ್) ಪ್ರತ್ಯೇಕ ಕಟ್ಟಡ ಕೈಗೊಳ್ಳುತ್ತಿದ್ದು, ಅಲ್ಲದೆ ಬರುವ ದಿನಗಳಲ್ಲಿ ಡಯಾಲಿಸಸ್ ಕೇಂದ್ರವು ಒದಗಿಸುತ್ತಿದ್ದಾರೆ. ಇಂದರಿಂದ ರೋಗಿಗಳಿಗೆ ಸ್ಥಳೀಯ ಮಟ್ಟದಲ್ಲಿ ಎಲ್ಲ ರೀತಿಯಿಂದ ತಪಾಸಣೆ ಮತ್ತು ಚಿಕಿತ್ಸೆ ಅನುಕೂಲವಾಗಲಿದೆ ಎಂದು ಹೇಳಿದರು.

ಪುರಸಭೆ ಅಧ್ಯಕ್ಷೆ ರಾಜಶ್ರೀ ಶ್ರೀಶೈಲ ಖಜೂರಿ, ಮಾಜಿ ಅಧ್ಯಕ್ಷ ವಿಠ್ಠಲರಾವ್ ಪಾಟೀಲ, ಸದಸ್ಯ ಧೋಂಡಿಬಾ ಸಾಳುಂಕೆ, ಮುಖಂಡ ವಿಜಯಕುಮಾರ ಕೋಥಳಿಕರ್, ರಾಜ್ಯ ಸರ್ಕಾರಿ ನೌಕರ ಸಂಘದ ಉಪಾಧ್ಯಕ್ಷ ಶ್ರೀಕಾಂತ ಭೂಸನೂರ, ಆರೋಗ್ಯ ಸ್ಥಾಯಿ ಸಮಿತಿಯ ಅಡವೀರಾಜ ಅತ್ನೂರೆ, ಪ್ರಭಾಕರ್ ಘನಾತೆ, ಲ್ಯಾಬ್ ತಾಂತ್ರಿಕ ಉಮರಲಿ ಸೇರಿದಂತೆ ಸಾರ್ವಜನಿಕರು, ಕಾಮಗಾರಿ ಗುತ್ತಿಗೆದಾರರು ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಹಾಜರಿದ್ದರು.