ಆಸ್ಪತ್ರೆಗೆ ಮೂಲಸೌಲಭ್ಯ ಒದಗಿಸುವಂತೆ ಒತ್ತಾಯ

ಸಿರವಾರ.ಜು.೧೮- ವಿಧಾನ ಪರಿಷತ್ ಸದಸ್ಯರು ಸಿರವಾರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀಡಿರುವ ಅಂಬುಲೇನ್ಸ್ ಬಲ್ಲಟಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳಿಸುವುದು ಅಕ್ಷಮ್ಯವಾಗಿದ್ದೂ, ಸಿರವಾರ ಕೇಂದ್ರದಲ್ಲಿ ಅಂಬುಲೇನ್ಸ್ ಸೇವೆಗೆ ಬಳಸಬೇಕು.
ಆಸ್ಪತ್ರೆಗೆ ಮೂಲ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಕರ್ನಾಟಕ ರೈತ ಸಂಘದಿಂದ ತಾಲೂಕ ಆರೋಗ್ಯಾಧಿಕಾರಿಗಳಿಗೆ ನೀಡಿದ ಮನವಿ ಪತ್ರದ ಮೂಲಕ ಒತ್ತಾಯಿಸಿದ್ದಾರೆ. ಸಿರವಾರ ಪ್ರಾಥಮಿಕ ಕೇಂದ್ರಕ್ಕೆ ಕೇಂದ್ರ ಸ್ಥಾನವಾಗಿರುವುದರಿಂದ ಸುತ್ತಮುತ್ತಲಿನ ಸುಮಾರು ೩೦ಕ್ಕೂ ಅಧಿಕ ಗ್ರಾಮ, ಹಳ್ಳಿಗಳ ಜನರು ಈ ಆರೋಗ್ಯ ಕೇಂದ್ರಕ್ಕೆ ಆಗಮಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಾರೆ.
ಇದನ್ನು ಅರಿತು ಮಾಜಿ ವಿಧಾನಪರಿಷತ ಸದಸ್ಯರು ಅಂಬುಲೇನ್ಸ್ ನೀಡಿದರು, ಇದನ್ನು ಬಲ್ಲಟಗಿ ಆರೋಗ್ಯ ಕೇಂದ್ರಕ್ಕೆ ಹಸ್ತಾಂತರ ಮಾಡುವ ಹುನ್ನಾರ ನಡೆದಿದೆ. ಅದನ್ನು ಕೈ ಬಿಡಬೇಕು, ಈ ಹಿಂದೆ ಮಹಿಳೆಯರ ಸಂತಾನ ಹರಣ (ಮಕ್ಕಳ ಆಪರೇಷನ್) ಕೇಂದ್ರ ಮಾಡಲಾಗುತ್ತಿತು. ಅದನ್ನು ಈಗ ಕವಿತಾಳ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಾಡಲಾಗುತ್ತಿದೆ.
ಅದನು ಮತ್ತೆ ಸಿರವಾರ ಕೇಂದ್ರದಲ್ಲಿ ಪ್ರಾರಂಭಿಸಬೇಕು. ಸಿರವಾರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೇಗೆ ಏರಿದರೂ, ಸೂಕ್ತ ವೈದ್ಯರ, ಸಲಕರಣೆಗಳನ್ನು ಸರ್ಕಾರ ವೈದ್ಯರನನು ನೇಮಕ ಮಾಡಿ, ಸಲಕರಣೆ ನೀಡಬೇಕು. ಕೇಂದ್ರದಲ್ಲಿ ಶುದ್ದ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಕೈಕೊಟ್ಟರೆ ಜನರೇಟರ ವ್ಯವಸ್ಥೇಯನ್ನು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ನಾಗರಾಜ ಬೊಮ್ಮನಾಳ, ಉಪಾಧ್ಯಕ್ಷ ವಿರೇಶ ನಾಯಕ, ಕಾರ್ಯದರ್ಶಿ ಹುಲಿಗೆಪ್ಪ ಮಡಿವಾಳ, ಸದಸ್ಯರಾದ ಚಂದ್ರಶೇಖರ, ರಮೇಶ ಅಂಗಡಿ, ಹೆಚ್.ಕೆ.ಬಸವರಾಜ, ಹನುಮಂತ, ಬಸವರಾಜ ಮಲ್ಲಿಕಾರ್ಜುನ ಹುಡೇದ, ಶೀನಪ್ಪ, ಗೊವಿಂದಪ್ಪ ಸೇರಿದಂತೆ ಇನ್ನಿತರರು ಇದ್ದರು.