ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ ಚಿದಾನಂದ ಸವದಿ

ಅಥಣಿ : ಎ.1:ತಾಲೂಕಿನ ಕೊಕಟನೂರ ಗ್ರಾಮದ ಸಮೀಪ ಇರುವ ಶಾಂತಾಬಾಯಿ ದೇಶಪಾಂಡೆ ಪಬ್ಲಿಕ ಸ್ಕೂಲ್ ಹತ್ತಿರ ಇಂದು ಖಾಸಗಿ ವಾಹನ ಮತ್ತು ಟ್ರ್ಯಾಕ್ಟರ್ ಮಧ್ಯೆ ಸಂಭವಿಸಿದ ಭೀಕರ
ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಹಲವರನ್ನು ಚಿಕಿತ್ಸೆಗಾಗಿ ಅಥಣಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿದ ತಕ್ಷಣವೇ ಆಸ್ಪತ್ರೆಗೆ ಭೇಟಿ ನೀಡಿದ ಬಿಜೆಪಿ ಯುವ ನಾಯಕ ಚಿದಾನಂದ ಲಕ್ಷ್ಮಣ ಸವದಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿ, ನೆರವಿಗೆ ಧಾವಿಸಿದರು.
ನಿನ್ನೆ ಕೊಕಟನೂರ ಗ್ರಾಮದ ಸಂತೆ ಇರುವ ಕಾರಣ ವ್ಯಾಪಾರಸ್ಥರು ಅಥಣಿಯಿಂದ ಕೊಕಟನೂರ ಸಂತೆಗೆ ಹೊರಟಿದ್ದ ವೇಳೆ ಈ ಅವಘಡ ಸಂಭವಿಸಿದೆ. ವಾಹನದಲ್ಲಿ ಸುಮಾರು 14 ಜನ ಸಂತೆಗೆ ಹೊರಟಿದ್ದರು. ಅದರಲ್ಲಿ ಪಿಕ್ ಅಪ್ ವಾಹನ ಚಾಲಕ ಮೃತಪಟ್ಟಿದ್ದು, ಇನ್ನುಳಿದವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ,
ಈ ವೇಳೆ ಯುವ ನಾಯಕ ಚಿದಾನಂದ ಸವದಿ ಮಾತನಾಡಿ ಅಪಘಾತದಲ್ಲಿ ಗಾಯಗೊಂಡವರು ಯಾರು ಹೇದರಬೇಕಾಗಿಲ್ಲ ನಿಮ್ಮ ಜೊತೆ ಸದಾ ನಾ ನಿರುತ್ತೇನೆ ಎಂದು ಗಾಯಾಳುಗಳಿಗೆ ಧೈರ್ಯ ತುಂಬಿದರು,