ಆಸ್ಪತ್ರೆಗೆ ಬಂದವರಿಗೆ ಸೌಜನ್ಯದಿಂದ ಚಿಕಿತ್ಸೆ ನೀಡಲು ಕರೆ


ಸಂಜೆವಾಣಿ ವಾರ್ತೆ
ಸಂಡೂರು : ಜು:28  ತಾಲೂಕಿನ ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಹೆಚ್.ಎಲ್ ಜನಾರ್ದನ್ ಅವರು ಬೇಟಿ ನೀಡಿ ಔಷಧ ದಾಸ್ತಾನು ಪರಿಶೀಲನೆ ನಡೆಸಿದರು, ಈ ಸಂದರ್ಭದಲ್ಲಿ ವೈದ್ಯರಿಗೆ ಸಲಹೆ ನೀಡುತ್ತಾ ಕಳೆದ ಕೆಲ ದಿನಗಳಿಂದ ಮಳೆಯಾಗುತ್ತಿದ್ದು ಸಾಂಕ್ರಾಮಿಕ ರೋಗಗಳು ಜನರಿಗೆ ಬಾಧಿಸುವ ಸಂಭವವಿರುತ್ತದೆ, ಸೌಜನ್ಯದಿಂದ ವಿಚಾರಿ ಸೂಕ್ತ ಚಿಕಿತ್ಸೆ ನೀಡಿ, ಔಷಧಿ ದಾಸ್ತಾನು ಇಟ್ಟುಕೊಳ್ಳಲು ಸೂಚಿಸಿದರು, ರಾತ್ರಿ ಪಾಳೆಯದಲ್ಲೂ ರೋಗಿಗಳು ಬಂದರೆ ಸ್ಪಂದಿಸಿ ಚಿಕಿತ್ಸೆ ನೀಡುವಂತೆ ಸೂಚಿಸಿದರು, ಜೆ.ಎಸ್.ಎಸ್.ಕೆ ಯೋಜನೆಯ ಒಳ ರೋಗಿಗಳಿಗೆ ಡಯಟ್ ನೀಡುವ ಬಗ್ಗೆ ವಿಚಾರಿಸಿದರು,ಗ್ರಾಮಗಳಲ್ಲಿ ನೀರು ಸರಬರಾಜು ಪೈಪ್ ಲಿಕ್ ಆಗಿ ಕುಡಿಯುವ ನೀರು ಕಲುಷಿತ ವಾಗಬಹುದು ಮೂಲ ನೀರಿನ ಮತ್ತು ಪಾಯಿಂಟ್ ಗಳ ಮಾದರಿ  ಸಂಗ್ರಹಗಳನ್ನು ಪರೀಕ್ಷೆಗೆ ಒಳಪಡಿಸಿ, ಯೋಗ್ಯ ವಿಲ್ಲದ್ದರೆ ಗ್ರಾಮ ಪಂಚಾಯತಿ ಕ್ರಮ ವಹಿಸಲು ಸೂಚಿಸಿ, ಮತ್ತು ಸೊಳ್ಳೆಗಳ ಉತ್ಪತ್ತಿಗೆ ವಾತಾವರಣ ಪೂರಕವಾಗಿದೆ, ಮುಂಜಾಗ್ರತಾ ಕ್ರಮವಾಗಿ  ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಡೆಂಗ್ಯೂ, ಚಿಕೂನ್ ಗುನ್ಯಾ ಹರಡದಂತೆ ಎಚ್ಚರಿಕೆ ವಹಿಸಿ, ಆಸ್ಪತ್ರೆಯ ಸ್ವಚ್ಛತೆಗೆ ಗಮನವಿರಲಿ, ಅತ್ಯವಸರ ಔಷಧಗಳು ಲಭ್ಯತೆ ಇರಲಿ ಎಂದು ತಿಳಿಸಿದರು,
 ಈ ಸಂದರ್ಭದಲ್ಲಿ ಡಾ.ಗೋಪಾಲ್ ರಾವ್,ಡಾ.ರಜಿಯಾ ಬೇಗಂ,ಸೂಪರಿಂಟೆಂಡೆಂಟ್ ಹರ್ಷ, ಪ್ರಶಾಂತ್,ಅನ್ಸಾರಿ,ಮಂಜುನಾಥ್,ಶಕೀಲ್, ಲಕ್ಷ್ಮಿ, ರೂಪಾ, ವೆಂಕಟೇಶ, ಶಶಿದರ್, ಶ್ರೀರಾಮುಲು,ಶಿವಕುಮಾರ್, ಸಿದ್ದೇಶ್ ಇತರರು ಹಾಜರಿದ್ದರು