ಆಸ್ಪತ್ರೆಗೆ ಕೂಡ್ಲಿಗಿ ಶಾಸಕ ಭೇಟಿ ಮೃತರ ಕುಟುಂಬದ ಆಕ್ರಂದನ, ಶಾಸಕ ಸಾಂತ್ವನ.

ಬಿ. ನಾಗರಾಜ್, ಕೂಡ್ಲಿಗಿ

ಕೂಡ್ಲಿಗಿ. ಸೆ 1 :- ಕಳೆದ ರಾತ್ರಿ ಹುಲಿಗೆಮ್ಮ ದೇವಸ್ಥಾನಕ್ಕೆ ಹೊರಟಿದ್ದ ಭತ್ತನಹಳ್ಳಿ ಕುಟುಂಬವಿರುವ ಮಿನಿವಾಹನಕ್ಕೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದು ಇಂದು ಮಧ್ಯಾಹ್ನ ಕೂಡ್ಲಿಗಿ ಆಸ್ಪತ್ರೆಗೆ ಭೇಟಿ ನೀಡಿದ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಅವರೆದುರು ಮೃತರ ಕುಟುಂಬದ ಮಹಿಳೆಯರ ಕಣ್ಣೀರಿನ ಆಕ್ರಂದನ ಮುಗಿಲು ಮುಟ್ಟಿದ್ದು ಶಾಸಕರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. 

 ಇದಕ್ಕೂ ಮೊದಲು ಮೃತರ ಮೃತದೇಹವಿರುವ ಶವಗಾರಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯೊಳಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ ಶಂಕರನಾಯ್ಕ್ ಹಾಗೂ ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ ಷಣ್ಮುಖನಾಯ್ಕ್, ಅವರೊಂದಿಗೆ ಪ್ರತಿ ಆಸ್ಪತ್ರೆ ಕೊಠಡಿ, ಹೊರ ರೋಗಿ ಹಾಗೂ ಒಳರೋಗಿಗಳ ಜೊತೆ ಮಾತನಾಡಿ ಆರೋಗ್ಯ ವಿಚಾರಣೆ ಎಕ್ಸ್ ರೇ ಕೊಠಡಿ, ಹೆರಿಗೆ ವಾರ್ಡ್ ಗಳಿಗೆ ಭೇಟಿ ನೀಡಿದರು ಹಾಗೂ ಸ್ವಚ್ಛತೆ ಮತ್ತು ಆಸ್ಪತ್ರೆಯ ಸುಣ್ಣಬಣ್ಣ ಮತ್ತು ಕೆಲವು ಕಡೆ ಸ್ವಚ್ಛತೆ ಕಾಣದೆ ಇದ್ದುದನ್ನು ಕಂಡು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ತರಾಟೆಗೆ ತೆಗೆದುಕೊಂಡರು ಮಹಿಳಾ ಶೌಚಾಲಯವನ್ನು ವೀಕ್ಷಿಸಿ ಅಲ್ಲಿನ ಅಸ್ವಚ್ಛತೆ ಗಬ್ಬುನಾರುವ ವಾತಾವರಣ  ಮತ್ತು ಎದುರಿಗೆ ಇರುವ ದಂತವೈದ್ಯರ ಈ ವಾಸನೆಯಲ್ಲಿ ಕರ್ತವ್ಯ ಹೇಗೆ ನಿಭಾಯಿಸುತ್ತಾರೆಂದು ತಿಳಿದು ದಂತವೈದ್ಯರ ಕೊಠಡಿ ಬದಲಾಯಿಸುವಂತೆ ಶಾಸಕ ಡಾ ಶ್ರೀನಿವಾಸ ಜಿಲ್ಲಾ ವೈದ್ಯಾಧಿಕಾರಿಗಳಿಗೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಕೂಡ್ಲಿಗಿ ಆಸ್ಪತ್ರೆಯ ಔಷಧಿ ಟಾನಿಕ್ ಇತರೆ ಸ್ಟಾಕ್ ಗಳನ್ನು ಸಹ ವೀಕ್ಷಣೆ ಮಾಡಿದರು ಶೇ 80ರಷ್ಟು ಔಷಧಿ ಕೊರತೆ ಇಲ್ಲ ಎಂದು ಶಾಸಕರು ಪತ್ರಕರ್ತರೆದುರು ತಿಳಿಸಿದರು.