ಆಸ್ಪತ್ರೆಗೆ ಕೂಡ್ಲಿಗಿ ಶಾಸಕ ಭೇಟಿ.ಮೃತರ ಕುಟುಂಬದ ಆಕ್ರಂದನ, ಶಾಸಕ ಸಾಂತ್ವನ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಸೆ 2 :-  ಶ್ರೀ ಹುಲಿಗೆಮ್ಮ ದೇವಸ್ಥಾನಕ್ಕೆ ಹೊರಟಿದ್ದ ಭತ್ತನಹಳ್ಳಿ ಕುಟುಂಬವಿರುವ ಮಿನಿವಾಹನಕ್ಕೆ ಲಾರಿಯೊಂದು ಮಂಗಳವಾರ ರಾತ್ರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದು ನಿನ್ನೆ  ಮಧ್ಯಾಹ್ನ ಕೂಡ್ಲಿಗಿ ಆಸ್ಪತ್ರೆಗೆ ಭೇಟಿ ನೀಡಿದ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಅವರೆದುರು ಮೃತರ ಕುಟುಂಬದ ಮಹಿಳೆಯರ ಕಣ್ಣೀರಿನ ಆಕ್ರಂದನ ಮುಗಿಲು ಮುಟ್ಟಿದ್ದು,ಶಾಸಕರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
 ಇದಕ್ಕೂ ಮೊದಲು ಮೃತರ ಮೃತದೇಹವಿರುವ ಶವಗಾರಕ್ಕೂ ಭೇಟಿ ನೀಡಿದ  ಶಾಸಕರು ಅವರ ಆತ್ಮಕ್ಕೆ ಶಾಂತಿ ಕೋರಿದರು.