ಆಸ್ಪತ್ರೆಗಳ ಆವರಣದಲ್ಲಿ ಆಹಾರದ ಪೊಟ್ಟಣ ವಿತರಣೆ

ದಾವಣಗೆರೆ.ಮೇ.೩೧; ಜಮಿಯತ್ ಉಲ್ಮಾ ವತಿಯಿಂದ  ನಗರದ ಎಸ್.ಎಸ್.ಆಸ್ಪತ್ರೆ ಆವರಣ, ಬಾಪೂಜಿ ಆಸ್ಪತ್ರೆ ಆವರಣ, ಚಿಗಟೇರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಕೊರೊನ ರೋಗಿಗಳಿಗೆ ಹಾಗೂ ರೋಗಿಗಳ ಸಂಬಂಧಿಕರಿಗೆ ಆಹಾರದ ಪೊಟ್ಟಣ ವಿತರಿಸಲಾಯಿತು. ಈ ಸಂಧರ್ಭದಲ್ಲಿ ಜಮಿಯತ್ ಉಲ್ಮಾ ದಾವಣಗೆರೆ ಜಿಲ್ಲಾ ಅಧ್ಯಕ್ಷರಾದ ಮೌಲಾನಾ ಸಮಿಉಲ್ಲಾ ಖಾಸ್ಮಿ,ಮೊಹಮ್ಮದ್ ಜಿಕ್ರಿಯಾ, ರಿಯಾಜುದ್ದೀನ್, ಮೊಹಮ್ಮದ್ ಶಬ್ಬೀರ್, ಸೈಯದ್ ಅಲಿ, ಆಸಿಫ್, ಮನ್ಸೂರ್ ಇನ್ನಿತರರು ಭಾಗವಹಿಸಿದ್ದರು