ಆಸ್ತಿ ವಿವಾದ: ಮಹಿಳೆ ಕೊಲೆ ಮಾಡಿದ್ದ ಮೂವರು ಆರೋಪಿಗಳ ಬಂಧನ

ಕಲಬುರಗಿ,ಜು.14-ಇತ್ತೀಚೆಗೆ ಇಲ್ಲಿನ ಕೆ.ಕೆ.ನಗರದಲ್ಲಿ ನಡೆದ ವಿಜಯಲಕ್ಷ್ಮೀ ಗಂಡ ಮಲಕಯ್ಯ ಮಠ (44) ಎಂಬ ಮಹಿಳೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಸಬ್ ಅರ್ಬನ್ ಪೊಲೀಸರು ಬಂಧಿಸಿದ್ದಾರೆ.
ಸಿಂದಗಿ (ಬಿ) ಗ್ರಾಮದ ರೇವಣಸಿದ್ದಯ್ಯ ಕುಪೇಂದ್ರಯ್ಯ ಮಠ (35), ಸಿದ್ರಾಮಯ್ಯ ಕುಪೇಂದ್ರಯ್ಯ ಮಠ (26) ಮತ್ತು ಬಿದ್ದಾಪುರ ಕಾಲೋನಿಯ ಮಡೆಪ್ಪ ಅಲಿಯಾಸ್ ಮಳೇಂದ್ರ ಶ್ರೀಶೈಲ ಮಠ (38) ಎಂಬುವವರನ್ನು ಬಂಧಿಸಿ 1 ತಲವಾರ, 2 ಚಾಕು, ಆಟೋ, ಬೈಕ್ ಮತ್ತು 3 ಮೊಬೈಲ್ ಜಪ್ತಿ ಮಾಡಿದ್ದಾರೆ.
ಜು.11 ರಂದು ಬೆಳಿಗ್ಗೆ 10.30ರ ಸುಮಾರಿಗೆ ಆರೋಪಿಗಳು ವಿಜಯಲಕ್ಷ್ಮೀ ಅವರನ್ನು ತಲವಾರ, ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಅಲ್ಲದೆ, ಅವರ ಮಕ್ಕಳ ಮೇಲೂ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಲು ಯತ್ನಿಸಿ ಬೈಕ್ ಮತ್ತು ಆಟೋದಲ್ಲಿ ಪರಾರಿಯಾಗಿದ್ದರು.
ಈ ಸಂಬಂಧ ಮೃತಳ ಪುತ್ರ ಮಹಾದೇವ ಮಲಕಯ್ಯ ಮಠ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ದೂರಿನ ಅನ್ವಯ ಉಪ ಪೊಲೀಸ್ ಆಯುಕ್ತರಾದ ಅಡ್ಡೂರು ಶ್ರೀನಿವಾಸಲು ಐ.ಎ.ಚಂದ್ರಪ್ಪ, ಸಬ್ ಅರ್ಬನ್ ಉಪ ವಿಭಾಗದ ಎಸಿಪಿ ಗೀತಾ ಬೇನಾಳ ಅವರ ಮಾರ್ಗರ್ದನದಲ್ಲಿ ಪಿಐ ರಮೇಶ ಕಾಂಬಳೆ ಅವ ನೇತೃತ್ವದಲ್ಲಿ ಪಿಎಸ್‍ಐಗಳಾದ ಕವಿತಾ ಚವ್ಹಾಣ್, ಹುಸೇನ್ ಸಾಬ್, ಸಲಿಮೋದ್ದೀನ್, ಎಎಸ್‍ಐಗಳಾದ ನಾಗರಾಜ, ಪುಂಡಲಿಕ, ಸಿಬ್ಬಂದಿಗಳಾದ ಮಲ್ಲಿಕಾರ್ಜುನ, ನಾಗೇಂದ್ರ, ಪ್ರಕಾಶ, ಪ್ರಶಾಂತ, ಅನೀಲ, ಶಿವರಾಜ ಮತ್ತು ಅನಿಲ ಅವರನ್ನೊಳಗೊಂಡ ಪ್ರತ್ಯೇಕ ತಂಡ ರಚಿಸಲಾಗಿತ್ತು. ಈ ತಂqಗಳುÀ ತನಿಖೆ ನಡೆಸಿ ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿವೆ.