ಆಸ್ತಿ ತೆರಿಗೆಯಲ್ಲಿ ಶೇ.5ರಷ್ಟು ರಿಯಾಯಿತಿ

ತಾಳಿಕೋಟೆ:ಎ.12:2023-24 ನೇ ಸಾಲಿನ ಏಪ್ರಿಲ್ 30ರ ಒಳಗಾಗಿ ಸ್ವಯಂ ಘೋಷಿತ ಆಸ್ತಿತೆರಿಗೆ ಭರಣಾ ಮಾಡಿದ್ದಲ್ಲಿ ಶೇ 5% ರಷ್ಟು ರಿಯಾಯಿತಿಯನ್ನು ನೀಡಲಾಗುವುದೆಂದು ಪುರಸಭೆ ಮುಖ್ಯಾಧಿಕಾರಿ ಉದಯಕುಮಾರ ಘಟಕಾಂಬಳೆ ಅವರು ತಿಳಿಸಿದ್ದಾರೆ.

  ಆಸ್ತಿಕರ ಬಾಕಿದಾರರು, ಆಸ್ತಿಕರ, ನೀರಿನ ಕರ, ವಾಣಿಜ್ಯ ಮಳಿಗೆ ಬಾಡಿಗೆ, ಉದ್ದಿಮೆ ಪರವಾನಿಗೆಯ ಶುಲ್ಕ ತುಂಬಿ, ಪಟ್ಟಣದ ಅಭಿವೃದ್ಧಿಗೆ ಸಹಕರಿಸಲು ಕೋರಿದೆ. ಈ ಮೊದಲು ಇದ್ದ ಪುರಸಭೆ ಕಾರ್ಯಾಲಯವನ್ನು ದೇವರ ಹಿಪ್ಪರಗಿ ರಸ್ತೆಯಲ್ಲಿರುವ ಎಸ್.ಕೆ ಕಾಲೇಜು ಎದುರುಗಡೆ ನೂತನವಾಗಿ ನಿರ್ಮಿಸಲಾಗಿರುವ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದು ನೂತನ ಕಚೇರಿಗೆ ರಜಾದಿನ ಹೊರತು ಪಡಿಸಿ ಬೆಟ್ಟಿ ನೀಡಿ ಸಂದಾಯ ಮಾಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.