ಆಸ್ಟ್ರೇಲಿಯಾ ನಡೆಗೆ ಖ್ಯಾತ ಕ್ರಿಕೆಟಿಗ ಮೈಕಲ್ ಸ್ಲೇಟರ್ ತೀವ್ರ ಆಕ್ಷೇಪ

ಮೆಲ್ಬೋರ್ನ್, ಮೇ ೦೪: ಭಾರತದಲ್ಲಿ ಕೋವಿಡ್ ಹೆಚ್ಚಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಸರ್ಕಾರ ತನ್ನ ಸ್ವದೇಶಿಗರಿಗೆ ಭಾರತದಿಂದ ಮರಳದಂತೆ ಕಟ್ಟಪ್ಪಣೆ ಹೊರಡಿಸಿರುವುದಕ್ಕೆ ಖ್ಯಾತ ಕ್ರಿಕೆಟಿಗ ಮೈಕೆಲ್ ಸ್ಲೇಟರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರ ಕೈಯಲ್ಲಿ ರಕ್ತ ಇದೆಯೇ ವಿನಃ ಮಾನವೀತೆಯ ಎನ್ನುವುದೇ ಇಲ್ಲ ಎಂದು ದೂಷಿಸಿದ್ದಾರೆ. ಭಾರತದಿಂದ ಆಸ್ಟ್ರೇಲಿಯನ್ನರು ದೇಶ ಪ್ರವೇಶಿಸುವುದಕ್ಕೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸಿರುವ ಕ್ರಮ ಕಠೋರವಾದುದು. ಇದೊಂದು ನಾಚಿಕೆಗೇಡಿತನ ಸಂಗತಿ ಎಂದು ಟ್ವೀಟ್ ಮಾಡಿದ್ದಾರೆ.
ಆಸ್ಟ್ರೇಲಿಯಾ ಸರ್ಕಾರ ತಮ್ಮನ್ನು ನಡೆಸಿಕೊಳ್ಳುತ್ತಿರುವ ರೀತಿ ಸರಿಯಲ್ಲ; ದೇಶಕ್ಕಾಗಿ ಆಟವಾಡುವ ನಾವು, ಈಗ ದೇಶಕ್ಕೆ ಬರುವುದು ನಿಷೇಧ ಎಂದರೆ ಏನರ್ಥ?. ಐಪಿಎಲ್ ನಲ್ಲಿ ಕೆಲಸ ಮಾಡಲು ಸರ್ಕಾರದಿಂದಲೇ ಸಮ್ಮತಿ ಇತ್ತು. ಆದರೆ, ಈಗ ಸರ್ಕಾರ ತಮ್ಮನ್ನು ನಿರ್ಲಕ್ಷಿಸುತ್ತಿದೆ ಎಂದು ಖಾರವಾಗಿ ಹೇಳಿದ್ದಾರೆ.
೫೧ ವರ್ಷದ ಸ್ಲೇಟರ್, ಐಪಿಎಲ್ ನಲ್ಲಿ ಕ್ರಿಕೆಟ್ ನಿರೂಪಕರಾಗಿ ಕೆಲಸ ಮಾಡುತ್ತಿದ್ದು, ಈಗ ಆಸ್ಟ್ರೇಲಿಯಾ ಸರ್ಕಾರ ಅವರನ್ನು ದೇಶಕ್ಕೆ ೧೪ ದಿನಗಳ ಬರದಂತೆ ನಿಷೇಧ ಹೇರಿದೆ. ಮಾಲ್ಡೀವಸ್ ನಲ್ಲಿ ಇನ್ನೂ ಎರಡು ವಾರಗಳ ಕಡ್ಡಾಯವಾಗಿ ಕಾಯಬೇಕೆಂದು ಹೇಳಿರುವುದು ಸ್ಲೇಟರ್ ಅವರ ಆಕ್ರೋಶಕ್ಕೆ ಕಾರಣವಾಗಿದೆ.