ಆಸ್ಟ್ರೇಲಿಯಾದ ಬಿಗಿ ಹಿಡಿತ ಒತ್ತಡದಲ್ಲಿ ಭಾರತ

Rishabh Pant breaks Sir Vivian Richards’ world record at Sydney Test, and he’s only 23

ಸಿಡ್ನಿ,ಜ.೯-ಗವಾಸ್ಕರ್ -ಬಾರ್ಡರ್ ಟೆಸ್ಟ್ ಸರಣಿಯ ೩ನೇ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಭಾರತದ ವಿರುದ್ಧ ಬಿಗಿ ಹಿಡಿತ ಸಾಧಿಸಿದೆ. ೨ನೇ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ಒಟ್ಟು ೧೯೭ ರನ್‌ಗಳ ಮುನ್ನಡೆ ಸಾಧಿಸಿದೆ ಇದರಿಂದಾಗಿ ಭಾರತ ಒತ್ತಡಕ್ಕೆ ಸಿಲುಕಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡವನ್ನು ೨೪೪ ರನ್‌ಗಳಿಗೆ ಆಸ್ಟ್ರೇಲಿಯಾ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದೆ.
೨ನೇ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ, ಡೇವಿಡ್ ವಾರ್ನರ್ ಮತ್ತು ಪುಕೊಲ್ಸ್ಕ್ ಉತ್ತಮ ಆರಂಭ ಒದಗಿಸಲು ವಿಫಲರಾಗಿ ವಿಲ್ ಕೇವಲ ೧೦ ರನ್ ಗಳಿಸಿ ಸಿರಾಜ್ ಬೌಲಿಂಗ್‌ನಲ್ಲಿ ನಿರ್ಗಮಿಸಿದರು. ಇದರ ಬೆನ್ನಲ್ಲೆ ೧೩ ರನ್ ಗಳಿಸಿದ್ದ ವಾರ್ನರ್,ಅಶ್ವಿನ್ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು.
ಇದರಿಂದಾಗಿ ಆಸ್ಟ್ರೇಲಿಯಾಕ್ಕೆ ಆರಂಭದಲ್ಲೇ ಭಾರತ ಆಘಾತ ನೀಡಿತು.ಆದರೆ, ಈ ಸಂದರ್ಭದಲ್ಲಿ ಜತೆಗೂಡಿದ ಲಾಬುಸ್ಚಾಘ್ನೆ ಮತ್ತು ಸ್ಟೀವನ್ ಸ್ಮಿತ್ ತಾಳ್ಮೆ ಆಟ ಪ್ರದರ್ಶಿಸಿ, ಭಾರತದ ಬೌಲಿಂಗ್ ದಾಳಿಗೆ ಸೂಕ್ತ ಉತ್ತರ ನೀಡಿದರು. ೩ನೇ ದಿನದ ಆಟದ ಅಂತ್ಯಕ್ಕೆ ಲಾಬುಸ್ಚಾಘ್ನೆ ೪೭ ಹಾಗೂ ಸ್ಮಿತ್ ೨೯ ರನ್ ಗಳಿಸಿ ಆಡುತ್ತಿದ್ದಾರೆ.
೩ನೇ ದಿನದ ಆಟ ಅಂತ್ಯಗೊಂಡಾಗ ಆಸ್ಟ್ರೇಲಿಯಾ ೨ ವಿಕೆಟ್ ನಷ್ಟಕ್ಕೆ ೧೦೩ ರನ್ ಗಳಿಸಿದೆ. ಒಟ್ಟು ೧೯೭ ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ.
ಇದಕ್ಕೂ ಮುನ್ನಾ ಭಾರತ ಆಸೀಸ್ ವೇಗದ ದಾಳಿಗೆ ದಿಟ್ಟ ಉತ್ತರ ನೀಡುವಲ್ಲಿ ಮತ್ತೊಮ್ಮೆ ವಿಫಲವಾಗಿದೆ. ೨ನೇ ಇನ್ನಿಂಗ್ಸ್‌ನಲ್ಲಿ ೨೪೪ ರನ್‌ಗಳಿಗೆ ಆಲೌಟ್ ಆಗಿದೆ. ಈ ಮೂಲಕ ೯೪ ರನ್‌ಗಳ ಹಿನ್ನೆಡೆ ಅನುಭವಿಸಿದೆ.
ಶುಭ್‌ಮನ್‌ಗಿಲ್ ಹಾಗೂ ಚೈತೇಶ್ವರ ಪೂಜಾರ ಅರ್ಧ ಶತಕ ಬಾರಿಸಿದ್ದನ್ನೊರತುಪಡಿಸಿ ಇತರೆ ಆಟಗಾರರಿಂದ ಉತ್ತಮ ಆಟ ಪ್ರದರ್ಶಿಸಲು ಸಾಧ್ಯವಾಗಲಿಲ್ಲ.
೯೬ ರನ್‌ಗಳಿಗೆ ೨ ವಿಕೆಟ್ ಕಳೆದುಕೊಂಡಿದ್ದ ಭಾರತ, ೩ನೇ ದಿನದ ಆಟ ಮುಂದುವರೆಸಿತು. ಹನುಮವಿಹಾರಿ ೪ ರನ್ ಗಳಿಸಿದ್ದಾಗ ರನೌಟ್‌ಗೆ ಬಲಿಯಾದರು. ಈ ವೇಳೆ ಪಂತ್ ಹಾಗೂ ಪೂಜಾರ ಜತೆಯಾಗಿ ೫೩ ರನ್ ಕಲೆ ಹಾಕಿದರು. ಪಂತ್ ೩೬ ರನ್ ಗಳಿಸಿದಾಗ ಔಟ್ ಆದರು. ಅರ್ಧಸತಖ ಬಾರಿಸಿದ ಬೆನ್ನಲ್ಲೆ ಚೈತೇಶ್ವರ ಪೂಜಾರ ನಿರ್ಗಮಿಸಿದರು.ರವೀಂದ್ರ ಜಡೇಜಾ ೨೮ ರನ್ ಗಳಿಸಿ ಅಜೇಯರಾಗುಳಿದರು.
ಅಶ್ವಿನ್-೧೦, ಸೈನಿ-೩, ಬೂಂಬ್ರಾ-೦, ಮೊಹಮದ್ ಸಿರಾಜ್-೬ ರನ್ ಗಳಿಸಿ ನಿರಾಸೆ ಮೂಡಿಸಿದರು.

ಬಾಕ್ಸ್
ಜಡೇಜಾ-ಪಂತ್‌ಗೆ ಗಾಯ
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯ ೩ನೇ ಪಂದ್ಯದಲ್ಲಿ ಭಾರತಕ್ಕೆ ಗಾಯಾಳುಗಳ ಸಮಸ್ಯೆ ಕಾಡುತ್ತಿದೆ. ೩ನೇ ಟೆಸ್ಟ್ ಪಂದ್ಯದ ವೇಳೆ ಇಬ್ಬರು ಆಟಗಾರರು ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ.ವೃಷಬ್‌ಪಂತ್ ಹಾಗೂ ಆಲ್‌ರೌಂಡರ್ ರವೀಂದ್ರ ಜಡೇಜಾ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಗಾಯ ಮಾಡಿಕೊಂಡಿದ್ದಾರೆ.
ಪಂತ್ ಎಡ ಮೊಣಗೈಗೆ ಹಾಗೂ ಜಡೇಜಾ ಅವರ ಎಡಗೈ ಹೆಬ್ಬೆರೆಳಿಗೆ ಪೆಟ್ಟು ಬಿದ್ದಿದೆ. ಇವರಿಬ್ಬರನ್ನು ಸ್ಕ್ಯಾನಿಂಗ್‌ಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈಗಾಗಲೇ ಕರ್ನಾಟಕ ಕೆ.ಎಲ್ ರಾಹುಲ್ ಗಾಯಗೊಂಡು ಸ್ವದೇಶಕ್ಕೆ ವಾಪಸ್ಸಾಗಿದ್ದಾರೆ. ಉಮೇಶ್ ಯಾದವ್ ಗಾಯಾಳುವಾಗಿ ಸರಣಿಯ ಉಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.
ಭಾರತ ತಂಡದ ನಾಯಕ ವಿರಾಟ್‌ಕೊಹ್ಲಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದು, ಸ್ವದೇಶಕ್ಕೆ ಮರಳಿದ್ದಾರೆ. ಹೀಗಾಗಿ ತಂಡವನ್ನು ಗಾಯಾಳು ಸಮಸ್ಯೆ ಬಿಟ್ಟು ಬಿಡದಂತೆ ಕಾಡುತ್ತಿದೆ.