
ವಿಜಯಪುರ, ಜು.15-ಆಸ್ಟ್ರೇಲಿಯಾದ ಪ್ರಖ್ಯಾತ ಯೂರೋಲಾಜಿ ವೈದ್ಯ ಡಾ.ಜಗದೀಶ ಜಾಂಬೋಟಿ ಬಿ.ಎಲ್.ಡಿ.ಇ ವಿವಿ ಗೆ ಭೇಟಿ ನೀಡಿ, ಯೂರೋಲಾಜಿಕ್ಷೇತ್ರದಲ್ಲಿಆಗಿರುವ ಆಧುನಿಕ ಆವಿಷ್ಕಾರಗಳ ಕುರಿತು ವಿಚಾರ ಮಿನಿಮಯ ಮಾಡಿಕೊಂಡರು.
ಬಿ.ಎಲ್.ಡಿ.ಇ ಆಸ್ಪತ್ರೆಯ ಯೂರೋಲಾಜಿ ವಿಭಾಗದಲ್ಲಿ ವೈದ್ಯರು, ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕಿಡ್ನಿ ಹಾಗೂ ಕಿಡ್ನಿಗೆ ಸಂಬಂಧಿಸಿದ ಕಾಯಿಲೆಗಳು ಜಗತ್ತಿನಲ್ಲಿ ಇಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಹೆಚ್ಚುತ್ತಿರುವ ಕಾಯಿಲೆಯನ್ನು ತಡೆಗಟ್ಟುವುದು ಹಾಗೂ ಸಮರ್ಪಕ ಚಿಕಿತ್ಸೆ ಒದಗಿಸುವುದು ಅತೀ ಅಗತ್ಯವಾಗಿದೆ. ಆ ದೃಷ್ಠಿಕೋನದಲ್ಲಿ ಹೊಸ-ಹೊಸ ಸಂಶೋಧನೆಗಳು ನಡೆಯುತ್ತಿದ್ದು, ಈ ಸಂಶೋಧನೆಗಳ ಸೌಲಭ್ಯ ಎಲ್ಲ ವೈದ್ಯರಿಗೂ ಹಾಗೂ ರೋಗಿಗಳಿಗೂ ದೊರೆಯಬೇಕು ಎಂದರು.
ಇದಕ್ಕೂ ಮುಂಚೆ ಬಿ.ಎಲ್.ಡಿ.ಇಡೀಮ್ಡ್ ವಿಶ್ವವಿದ್ಯಾಲಯ ಆಡಳಿತ ಕಛೇರಿಯಲ್ಲಿ ಉಪಕುಲಪತಿ ಡಾ.ಆರ್.ಎಸ್.ಮುಧೋಳ, ರಿಜಿಸ್ಟಾರ್ ಡಾ.ರಾಘವೇಂದ್ರ ಕುಲಕರ್ಣಿ, ಪ್ರಾಚಾರ್ಯ ಡಾ.ಅರವಿಂದ ಪಾಟೀಲ, ಆಸ್ಪತ್ರೆ ಅಧೀಕ್ಷಕ ಡಾ.ರಾಜೇಶ ಹೊನ್ನಟಗಿ ಯವರು ಜಾಂಬೋಟಿಯವರೊಂದಿಗೆ ವಿಚಾರ ಮಿನಿಮಯ ಮಾಡಿಕೊಂಡು ಸತ್ಕರಿಸಿದರು.
ಈ ಸಂದರ್ಭದಲ್ಲಿ ಡಾ.ಸರೋಜಿನಿ ಜಾಂಬೋಟಿ, ಡಾ.ರೇಖಾ ಮುಧೋಳ, ಡಾ.ಮಹಾಂತೇಶ ಬಿರಾದಾರ ಉಪಸ್ಥಿತರಿದ್ದರು.