ಆಸ್ಟ್ರೇಲಿಯಾದಲ್ಲಿ ಬೆಳೆದ ವಿಶ್ವದ ಅತಿದೊಡ್ಡ ಬ್ಲೂಬೆರ್ರಿ

ಮೆಲ್ಬೋರ್ನ್,ಮಾ.೧೬-ಆಸ್ಟ್ರೇಲಿಯಾದ ಕೊರಿಂಡಿಯಲ್ಲಿ ವಿಶ್ವದ ಅತಿದೊಡ್ಡ ಬ್ಲೂಬೆರ್ರಿ ಬೆಳೆಯಲಾಗಿದೆ. ೨೦.೪ ಗ್ರಾಂ ತೂಕ ಮತ್ತು ೩೯.೩೧ ಮಿಮೀ ಅಗಲದ ಈ ಬ್ಲೂಬೆರ್ರಿ ಗಿನ್ನೆಸ್ ವಿಶ್ವ ದಾಖಲೆಗಳಲ್ಲಿ ಸೇರಿದೆ. ಇದರ ಗಾತ್ರ ಗಾಲ್ಫ್‌ನಲ್ಲಿ ಬಳಸುವ ಚೆಂಡಿನಷ್ಟು ಎಂದು ಹೇಳಲಾಗುತ್ತಿದೆ. ಇದು ಸರಾಸರಿ ಬ್ಲೂಬೆರ್ರಿಗಿಂತ ೧೦ ಪಟ್ಟು ದೊಡ್ಡದಾಗಿದೆ. ಹಿಂದಿನ ದಾಖಲೆಯನ್ನು ಹೊಂದಿದ್ದ ಬ್ಲೂಬೆರ್ರಿ ೧೬.೨ ಗ್ರಾಂ ತೂಕ ಮತ್ತು ೩೬.೩೩ ಮಿಮೀ ಅಗಲವಿತ್ತು.


ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ದೊಡ್ಡ ಹಣ್ಣುಗಳನ್ನು ಪೂರೈಸಲು ಕೋಸ್ಟಾ ಗ್ರೂಪ್ ಅಭಿವೃದ್ಧಿಪಡಿಸಿದ ಹೊಸ ಮಾದರಿಯ ತಳಿಯಾಗಿದೆ.
೧೨ ವಾರಗಳ ನಂತರ, ಬೆರ್ರಿ ಈ ವಾರ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನಿಂದ ಇದುವರೆಗೆ ದಾಖಲಾದ ಅತ್ಯಂತ ಭಾರವಾದ ಬ್ಲೂಬೆರ್ರಿ ಎಂದು ಪ್ರಮಾಣೀಕರಿಸಲ್ಪಟ್ಟಿದೆ.
ಈ ದೈತ್ಯ ಬ್ಲೂಬೆರ್ರಿ ಹೆಸರು ಈಗ ಗಿನ್ನೆಸ್ ಪುಸ್ತಕದಲ್ಲಿಯೂ ದಾಖಲಾಗಿದೆ.
ಇದರ ಗಾತ್ರವು ಸರಾಸರಿ ಬ್ಲೂಬೆರ್ರಿಗಿಂತ ೧೦ ಪಟ್ಟು ಹೆಚ್ಚು.
ಈ ಅಸಾಮಾನ್ಯ ಬ್ಲೂಬೆರ್ರಿ ಕಡು ನೀಲಿ ಬಣ್ಣವನ್ನು ಹೊಂದಿದೆ.ಇದನ್ನು ಹಾಕಿಂಗ್, ಜೆಸ್ಸಿಕಾ ಸ್ಕಾಲ್ಜೊ ಮತ್ತು ಮೇರಿ-ಫ್ರಾನ್ಸ್ ಕೋರ್ಟೊಯಿಸ್ ತಂಡವು ಬಹಳ ಮುತುವರ್ಜಿಯಿಂದ ಬೆಳೆಸಿದೆ.
ಈ ಬ್ಲೂಬೆರ್ರಿ ಹಣ್ಣಿನ ತೂಕವನ್ನು ತಿಳಿದು ಅದನ್ನು ಬೆಳೆದವರು ಕೂಡಾ ಆಶ್ಚರ್ಯಚಕಿತರಾಗಿದ್ದಾರೆ.
ಎಟರ್ನಾ ತಳಿಯು ಸತತವಾಗಿ ದೊಡ್ಡ ಫಲವನ್ನು ನೀಡುತ್ತದೆ ಎಂದು ಜಮೀನಿನಲ್ಲಿ ಬಂಪರ್ ಬೆಳೆಯನ್ನು ತೆಗೆದ ಜಮೀನು ಮಾಲೀಕ ಬ್ರಾಡ್ ಹಾಕಿಂಗ್ ಹೇಳುತ್ತಾರೆ.
ನವೆಂಬರ್‌ನಲ್ಲಿ ಇದನ್ನು ಬಳ್ಳಿಯಿಂದ ಬೇರ್ಪಡಿಸಿ ಫ್ರೀಜರ್‌ನಲ್ಲಿ ಸಂರಕ್ಷಣೆ ಮಾಡಿ ಇರಿಸಲಾಗಿದೆ.