
ಸೌತ್ ಹ್ಯಾಂಪ್ಟನ್, ಜ.೧- ಸಾರ್ವಜನಿಕ ಬಳಕೆಗಾಗಿ ಆಕ್ಸ್ಫರ್ಡ್ – ಆಸ್ಟ್ರಾಝೆನೆಕಾ ಲಸಿಕೆಯನ್ನು ಅಧಿಕೃತಗೊಳಿಸಿದ ಮೊದಲ ದೇಶ ಎನ್ನುವ ಹೆಗ್ಗಳಿಕೆಗೆ ಇಂಗ್ಲೆಂಡ್ ಪಾತ್ರವಾಗಿದೆ.
ಈ ತಿಂಗಳ ಮೊದಲ ವಾರದಲ್ಲಿ ದೇಶಾದ್ಯಂತ ಆಕ್ಸ್ಫರ್ಡ್ ಮತ್ತು ಆಸ್ಟ್ರಾಝೆನೆಕಾ ಲಸಿಕೆಯನ್ನು ವಿತರಿಸಲು ಅಲ್ಲಿನ ಸರ್ಕಾರ ಮುಂದಾಗಿದೆ. ಇಂಗ್ಲೆಂಡ್ನಲ್ಲಿ ಫೈಜರ್ ಸಂಸ್ಥೆ ಲಸಿಕೆಗೆ ಅನುಮತಿ ನೀಡಿದ ಬಳಿಕ ಎರಡನೇ ಲಸಿಕೆ ಇದಾಗಿದೆ.
ಬ್ರಿಟನ್ ಸರ್ಕಾರ ಈಗಾಗಲೇ ಆಕ್ಸ್ ಫರ್ಡ್ ಮತ್ತು ಆಸ್ಟ್ರಾಝೆನೆಕಾ ಸಂಸ್ಥೆಯಿಂದ ೧೦೦ ದಶಲಕ್ಷ ಡೋಸ್ ಪಡೆಯಲು ಆದೇಶಿಸಲಾಗಿದೆ. ಇಂಗ್ಲೆಂಡ್ನಲ್ಲಿ ೫೦ ದಶಲಕ್ಷ ಜನರಿಗೆ ಲಸಿಕೆ ಹಾಕುವುದಷ್ಟೇ ಸಾಮರ್ಥ್ಯವಿದೆ. ಆದರೆ ಇಂಗ್ಲೆಂಡ್ ಸರ್ಕಾರ ಅದಕ್ಕಿಂತ ಎರಡುಪಟ್ಟು ಲಸಿಕೆಯನ್ನು ಪಡೆಯಲು ಮುಂದಾಗಿದೆ.
ಈಗಾಗಲೇ ಆಸ್ಟ್ರೇಲಿಯಾ ೫೦ ದಶಲಕ್ಷ ಡೋಸ್, ಕೆನಡಾ ೨೦ ದಶಲಕ್ಷ ಡೋಸ್ ಸೇರಿದಂತೆ, ಜಗತ್ತಿನಾದ್ಯಂತ ೨.೫ ಶತಕೋಟಿ ಡೋಸ್ ಲಸಿಕೆಗಾಗಿ ಆಕ್ಸ್ ಫರ್ಡ್ ಮತ್ತು ಆಸ್ಟ್ರಾಝೆನೆಕಾ ಸಂಸ್ಥೆಯಿಂದ ಮುಂದಾಗಿದೆ.
ಆಕ್ಸ್ ಫರ್ಡ್ ಮತ್ತು ಆಸ್ಟ್ರಾ ಝೆನಾಕಾ ಸಂಸ್ಥೆಯಿಂದ ವಿವಿಧ ದೇಶಗಳು ಪಡೆದಿರುವ ಲಸಿಕೆಯನ್ನು ೨೦೨೧ರ ಮೊದಲ ತ್ರೈಮಾಸಿಕದಲ್ಲಿ ಪೂರೈಕೆ ಮಾಡಲು ಸಂಸ್ಥೆ ಮುಂದಾಗಿದೆ.
ಇಂಗ್ಲೆಂಡ್ನಲ್ಲಿ ಅಲ್ಲಿನ ಜನತೆ ಪ್ರತಿಯೊಬ್ಬರೂ ಲಸಿಕೆ ಪಡೆಯಲು ಅನುಕೂಲವಾಗುವಂತೆ ಅಲ್ಲಿನ ಸರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇನ್ನೂ ಅನೇಕ ದೇಶಗಳಲ್ಲಿ ಆ ದೇಶಗಳ ಜನಸಂಖ್ಯೆಗೆ ಅನುಗುಣವಾಗಿ ಆದ್ಯತೆ ಮೇರೆಗೆ ಲಸಿಕೆ ನೀಡಲು ಸರ್ಕಾರ ಉದ್ದೇಶಿಸಿದೆ.
ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ಕೊರೊನಾ ಸೋಂಕಿನ ಲಸಿಕೆ ಶೇ. ೯೦ ರಷ್ಟು ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ತುರ್ತು ಬಳಕೆಗೆ ಈಗಾಗಲೇ ಹಲವು ದೇಶಗಳಲ್ಲಿ ಅನುಮತಿ ನೀಡಲಾಗಿದೆ.
ಹಿನ್ನಲೆಯಲ್ಲಿ ಇಂಗ್ಲೆಂಡ್ ಸರ್ಕಾರ ಸಾರ್ವಜನಿಕ ಬಳಕೆಗೆ ಅನುವು ಮಾಡಿಕೊಟ್ಟಿದೆ. ಹೀಗಾಗಿ ಎಲ್ಲರಿಗೂ ಲಸಿಕೆಯನ್ನು ವಿತರಣೆ ಮಾಡಲು ಇಂಗ್ಲೆಂಡ್ ಸರ್ಕಾರ ಉದ್ದೇಶಿಸಿದೆ.