ಆಸ್ಟ್ರಾಜೆನೆಕಾ ಲಸಿಕೆ ವರದಿ ನೀಡಲು ಸೂಚನೆ

FILE PHOTO: Vials with a sticker reading, "COVID-19 / Coronavirus vaccine / Injection only" and a medical syringe are seen in front of a displayed AstraZeneca logo in this illustration taken October 31, 2020. REUTERS/Dado Ruvic/Illustration/File Photo


ಲಂಡನ್, ಏ. ೭- ಕೋವಿಡ್ ತಡೆಗೆ ಆಕ್ಸ್ ಫರ್ಡ್- ಆಸ್ಟ್ರಾಝೆನಿಕ್ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಆಸ್ಟ್ರಾಜೆನೆಕಾ ಲಸಿಕೆ ಪಡೆದಿದ್ದ ೩೦ ಜನರ ಪೈಕಿ ೭ ಮಂದಿ ಸಾವನ್ನಪ್ಪಿದ್ದಾರೆ. ಇವರಲ್ಲಿ ರಕ್ತ ಹೆಪ್ಪುಗಟ್ಟುವ ತೊಂದರೆ ಉಂಟಾಗಿದೆ ಎಂದು ಬ್ರಿಟನ್ ಹೇಳಿದೆ. ಆಸ್ಟ್ರಾಜೆನಕಾ ಲಸಿಕೆಯಿಂದ ಹೊರಗುಳಿಯಲು ಮುಂದಾಗಿದೆ.
ಆಸ್ಟ್ರಾಜೆನೆಕಾ ಲಸಿಕೆ ಪಡೆದ ಮೇಲೆ ರಕ್ತ ಹೆಪ್ಪುಗಟ್ಟುವಿಕೆ ತೊಂದರೆ ಕಾಣಿಸಿಕೊಳ್ಳುವುದರಿಂದ ಬಹುತೇಕ ಯುರೋಪಿಯನ್ ದೇಶಗಳು ಈ ಲಸಿಕೆಯಿಂದ ನಿರ್ಗಮಿಸುತ್ತಿವೆ. ಯುಕೆಯ ಮೆಡಿಸಿನ್ಸ್ ಅಂಡ್ ಹೆಲ್ತ್ ಕೇರ್ ಪ್ರಾಡಕ್ಟ್ಸ್ ರೆಗ್ಯುಲೇಟರಿ ಏಜೆನ್ಸಿ ಕೂಡ, ಮಾರ್ಚ್ ೨೪ರವರೆಗೆ ೩೦ ಜನರಲ್ಲಿ ರಕ್ತ ಹೆಪ್ಪುಗಟ್ಟುವ ತೊಂದರೆ ಕಾಣಿಸಿಕೊಂಡಿದ್ದು, ಈ ಪೈಕಿ ೭ ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.
ದೇಶದಲ್ಲಿ ೧೮.೧ ಮಿಲಿಯನ್ ಡೋಸ್ ಲಸಿಕೆಯನ್ನು ನೀಡಿದ ನಂತರ ವೈದ್ಯರು ಅಥವಾ ಸಾರ್ವಜನಿಕರು ಸರ್ಕಾರಿ ವೆಬ್ ಸೈಟ್ ಮೂಲಕ ಸಲ್ಲಿಸಿದ ಥ್ರಾಂಬೋಸಿಸ್ ವರದಿಗಳು ದಾಖಲಾಗಿವೆ.
ಅದರಲ್ಲಿ ಹೆಚ್ಚಿನ ಪ್ರಕರಣಗಳು ಸೆರೆಬ್ರಲ್ ವೆನಸ್ ಸಿನಸ್ ಥ್ರಾಂಬೋಸಿಸ್ ಎಂದು ಕರೆಯಲ್ಪಡುವ ಅಪರೂಪದ ರಕ್ತ ಹೆಪ್ಪುಗಟ್ಟುವ ಲಕ್ಷಣಗಳು ಕಾಣಬಂದಿವೆ ಎಂದು ಹೇಳಲಾಗಿದೆ.
ಈಗಾಗಲೇ ಯುರೋಪಿನ ಬಹುತೇಕ ರಾಷ್ಟ್ರಗಳು ಆಸ್ಟ್ರಾಜೆನೆಕಾ ಲಸಿಕೆಯಿಂದ ಹಿಂದೆ ಸರಿದಿವೆ. ನೆದರ್ಲ್ಯಾಂಡ್ಸ್ ೬೦ ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರಿಗೆ ಆಸ್ಟ್ರಾಜೆನೆಕಾ ಲಸಿಕೆ ನೀಡುವುದನ್ನು ನಿಲ್ಲಿಸಿದೆ. ಆದರೂ, ರಕ್ತ ಹೆಪ್ಪುಗಟ್ಟುವುದರಿಂದ ಒಬ್ಬರು ಮೃತಪಟ್ಟಿದ್ದಾರೆಂದು ನೆದರ್ ಲ್ಯಾಂಡ್ ಹೇಳಿದೆ.
ಜರ್ಮನಿ ಕೂಡ ೩೧ ರಕ್ತ ಹೆಪ್ಪುಗಟ್ಟುವಿಕೆ ಪ್ರಕರಣಗಳು ಕಾಣಬಂದ ಮೇಲೆ ೬೦ ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಲಸಿಕೆಯ ಬಳಕೆಯನ್ನು ಸ್ಥಗಿತಗೊಳಿಸಿದೆದೆ. ಫ್ರಾನ್ಸ್ ಸೇರಿದಂತೆ ಇತರ ಹಲವಾರು ದೇಶಗಳು ಕೂಡ ವಯಸ್ಸಿನ ನಿರ್ಬಂಧಗಳನ್ನು ಹೇರಿವೆ, ಡೆನ್ಮಾರ್ಕ್ ಮತ್ತು ನಾರ್ವೆ ಲಸಿಕೆಯ ಎಲ್ಲಾ ಬಳಕೆಯನ್ನು ಸ್ಥಗಿತಗೊಳಿಸಿವೆ.
ಈ ನಡುವೆ, ಆಸ್ಟ್ರಾಜೆನೆಕಾ ಲಸಿಕೆ ಸುರಕ್ಷಿತೆಯ ಬಗ್ಗೆ ಸ್ಟಷ್ಟ ವರದಿ ನೀಡಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ ಗೆ ಸೂಚನೆ ನೀಡಿದೆ. ವರದಿ ಬಂದ ನಂತರ ಲಸಿಕೆ ಬಳಕೆ ಅಥವಾ ತಡೆಯ ಬಗ್ಗೆ ಮುಂದಿನ ನಡೆ ನಿರ್ಧಾರವಾಗಲಿದೆ.