ಆಸ್ಟ್ರಾಜೆನೆಕಾ ಪ್ರತಿವಾರ ೨ ಲಕ್ಷ ಡೋಸ್ ಉತ್ಪಾದನೆ

ಲಂಡನ್,ಡಿ.ಜ.೨- ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನೆಕಾ ಸಂಸ್ಥೆ ಪ್ರತಿ ವಾರ ೨೦ ಲಕ್ಷ ಡೋಸ್ ಕೋವಿಡ್ ಲಸಿಕೆ ಉತ್ಪಾದಿಸಲು ಮುಂದಾಗಿದೆ.
ಜನವರಿ ಮಧ್ಯಭಾಗದಿಂದ ಪ್ರತಿ ವಾರ ಇಂಗ್ಲೆಂಡ್‌ನಲ್ಲಿ ಎರಡು ದಶಲಕ್ಷ ಲಸಿಕೆಯನ್ನು ಉತ್ಪಾದನೆ ಮಾಡಲು ಸಂಸ್ಥೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಜನವರಿ ಮೂರನೇ ವಾರದಿಂದ ಪ್ರತಿ ವಾರ ಎರಡು ದಶಲಕ್ಷ ಲಸಿಕೆ ಉತ್ಪಾದನೆ ಮಾಡಿ ಇಂಗ್ಲೆಂಡಿನ ಅತ್ಯಂತ ವಿತರಣೆ ಮಾಡಲು ಉದ್ದೇಶಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
೧೦೦ ದಶಲಕ್ಷ ಡೋಸ್‌ಗೆ ಆದೇಶ:
ಇಂಗ್ಲೆಂಡ್‌ನ ಜನರ ಅನುಕೂಲಕ್ಕಾಗಿ ೧೦೦ ದಶಲಕ್ಷ ಡೋಸ್ ಲಸಿಕೆಯನ್ನು ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಆದೇಶಿಸಿದ್ದಾರೆ.
ಇಂಗ್ಲೆಂಡ್‌ಗೆ ಅಗತ್ಯರುವ ಲಸಿಕೆ ಪಡೆಯುವ ಉದ್ದೇಶದಿಂದ ಈಗಾಗಲೇ ಹಲವು ಔಷಧ ತಯಾರಕ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಮೊದಲ ತ್ರೈಮಾಸಿಕದಲ್ಲಿ ಲಭ್ಯವಾಗುವ ನಿರೀಕ್ಷೆ ಇದೆ.
ಬ್ರಿಟನ್‌ನಲ್ಲಿ ಪ್ರತಿದಿನ ಸರಾಸರಿ ೫೦ ಸಾವಿರ ಹೊಸ ಪ್ರಕರಣಗಳು ಪತ್ತೆ ಆಗುತ್ತದೆ ಅದರಲ್ಲೂ ಕಳೆದ ನಾಲ್ಕು ದಿನಗಳಿಂದ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲರಿಗೂ ಇಂಗ್ಲೆಂಡ್ ಸರ್ಕಾರ ಮುಂದಾಗಿದೆ.
ಇಂಗ್ಲೆಂಡ್‌ನಲ್ಲಿ ಒಂದೇ ದಿನ ೫೩ ೨೮೫ ಹೊಸ ಪ್ರಕರಣಗಳು ಪತ್ತೆಯಾಗಿದ್ದು ೬೧೩ ಮುಂದಿ ಮೃತಪಟ್ಟಿದ್ದಾರೆ.