ಆಸ್ಟ್ರಾಜೆನೆಕಾದಿಂದ ಕೋವಿಡ್ ನಿರೋಧಕ ಔಷಧಿ ಪ್ರಯೋಗ

FILE PHOTO: Vials with a sticker reading, "COVID-19 / Coronavirus vaccine / Injection only" and a medical syringe are seen in front of a displayed AstraZeneca logo in this illustration taken October 31, 2020. REUTERS/Dado Ruvic/Illustration/File Photo

ಲಂಡನ್,ನ.೨೧- ಸುದೀರ್ಘ ಅವಧಿಯವರೆಗೆ ಕೊರೊನಾ ಸೋಂಕಿನ ವಿರುದ್ಧ ಹೋರಾಡಬಲ್ಲ ಪ್ರತಿಕಾಯದ ಅಂಶವಿರುವ ಔಷಧದ ಅಂತಿಮ ಹಂತದ ಪ್ರಯೋಗವನ್ನು ಆಸ್ಟ್ರಾಜೆನೆಕಾ ಪ್ರಾರಂಭಿಸಿದೆ.
ಈ ಔಷಧಿಯು ಜನರಿಗೆ ೧ ವರ್ಷಗಳ ಕಾಲ ಸೋಂಕಿನ ರಕ್ಷಣೆ ನೀಡುವ ಸಾಮರ್ಥ್ಯವಿದೆ ಎಂದು ಹೇಳಲಾಗಿದೆ. ಎಝೆಡ್‌ಡಿ ಹೆಸರಿನ ಔಷಧದ ಸುರಕ್ಷತೆ ಹಾಗೂ ಪರಿಣಾಮಕಾರಿಯಾಗಿದೆಯೇ ಎಂಬುದನ್ನು ಅರಿಯಲು ಅಂತಿಮ ಹಂತದ ಪರೀಕ್ಷೆಯನ್ನು ಯುರೋಪ್ ಮತ್ತು ಅಮೆರಿಕದ ೫ ಸಾವಿರ ಮಂದಿಯನ್ನು ಪರೀಕ್ಷೆಗೆ ಒಳಪಡಿಸಲು ಆಸ್ಟ್ರಾಜೆನೆಕಾ ಮುಂದಾಗಿದೆ.
ಈ ಔಷಧಿಯು ಲಸಿಕೆಗಿಂತ ವಿಭಿನ್ನವಾಗಿದೆ. ಈ ಔಷಧಿಯು ದೇಹದಲ್ಲಿ ರೋಗ ನಿರೋಧಕ ವ್ಯವಸ್ಥೆ ರೂಪುಗೊಳ್ಳುವಂತೆ ಪ್ರೇರೇಪಿಸುವ ಬದಲಿಗೆ ಈ ಪ್ರಯೋಗದಲ್ಲಿ ವ್ಯಕ್ತಿಗೆ ಪ್ರತಿಕಾಯಗಳನ್ನು ನೀಡಲಾಗುತ್ತದೆ.
ರೋಗನಿರೋಧಕ ಸಾಮರ್ಥ್ಯ ಕಡಿಮೆ ಇರುವ ವ್ಯಕ್ತಿಗಳಲ್ಲು ಹಾಗೂ ಲಸಿಕೆಗೆ ಸ್ಪಂದಿಸಿದವರಲ್ಲಿ ಪರಿಣಾಮಕಾರಿಯಾಗುವ ವಿಶ್ವಾಸ ಮೂಡಿಸಿದೆ.
ಆಸ್ಟ್ರಾಜೆನೆಕಾ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಕೋವಿಡ್ ಲಸಿಕೆಯನ್ನು ಆವಿಷ್ಕಾರಗೊಳಿಸುತ್ತಿದೆ.
ಬ್ರಿಟನ್‌ನಲ್ಲಿ ಈ ಪ್ರಯೋಗ ಇಂದು ಆರಂಭಗೊಂಡಿದ್ದು, ೧ ಸಾವಿರ ಮಂದಿ ಪಾಲ್ಗೊಂಡಿದ್ದಾರೆ ಎಂದು ೯ ಕಡೆ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಬ್ರಿಟನ್ ಘಟಕದ ಸಂಶೋಧಕರು ತಿಳಿಸಿದ್ದಾರೆ.
ವೈರಾಣುವನ್ನು ತಟಸ್ಥಗೊಳಿಸಬಲ್ಲ ಪ್ರತಿಕಾಯಗಳನ್ನು ಸ್ನಾಯುಗಳಿಗೆ ಇಂಜೆಕ್ಟ್ ಮಾಡುವ ಮೂಲಕ ಜನರಿಗೆ ರಕ್ಷಣೆ ನೀಡುವ ಬಗ್ಗೆ ಸಂಶೋಧನೆ ನಡೆಸುತ್ತಿದ್ದೇವೆ ಎಂದು ಪ್ರೊಫೆಸರ್ ಹಾಗೂ ಹಿರಿಯ ಸಂಶೋಧಕ ಆಂಡ್ರೂ ಉಸ್ಟಿಯಾನೊ ತಿಳಿಸಿದ್ದಾರೆ.