
ಬೆಂಗಳೂರು,ಜ೧೦- ಆಸ್ಟರ್ ಡಿಎಂ ಹೆಲ್ತ್ಕೇರ್ ಇಂಡಿಯಾ ಹೆಲ್ತ್ ಆಂಡ್ ವೆಲ್ನೆಸ್ ಪ್ರಶಸ್ತಿ ೨೦೨೦ನಲ್ಲಿ ಅತ್ಯುತ್ತಮ ಗೃಹ ಆರೋಗ್ಯಸೇವೆ ಬ್ರ್ಯಾಂಡ್ ಪ್ರಶಸ್ತಿ, ಗೃಹಸೇವೆಯಲ್ಲಿ ತೀವ್ರ ಆರೈಕೆಗೆ ಆರೋಗ್ಯ ನಾವೀನ್ಯತೆ ಪ್ರಶಸ್ತಿ, ಮತ್ತು ಕೋವಿಡ್ ರಕ್ಷಣೆ ಯೋಜನೆಯ ವರ್ಗದಲ್ಲಿ ಬೆಳ್ಳಿ ಪ್ರಶಸ್ತಿಯನ್ನು ಗೆದ್ದಿದೆ. ಗೃಹ ಆರೋಗ್ಯಸೇವೆ ವರ್ಗ ಮತ್ತು ಆರೋಗ್ಯ ನಾವೀನ್ಯತೆ ಪ್ರಶಸ್ತಿಗಳು ಗೃಹ ಆರೈಕೆಯಲ್ಲಿ ಅದರ ನಾವೀನ್ಯತೆಯನ್ನು ಗೌರವಿಸಿದರೆ, ಕೋವಿಡ್ ರಕ್ಷಣೆ ಯೋಜನೆ ಪ್ರಶಸ್ತಿಯು ಈ ಪಿಡುಗಿನ ಸಮಯದಲ್ಲಿ ರೋಗಿಗಳು ಬೇಗನೆ ಚೇತರಿಸಿಕೊಂಡು ಗುಣುಮುಖರಾಗಲು ಅವರಿಗೆ ನೆರವು ನೀಡಿರುವುದಕ್ಕಾಗಿ ಪ್ರದಾನಿಸಲಾಗಿದೆ.
ಕೋವಿಡ್ ೧೯ ಪಿಡುಗು ತೀವ್ರ ನಿಗಾ ಆರೈಕೆಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದೆ. ಆಸ್ಟರ್ ಡಿಎಂ ಹೆಲ್ತ್ಕೇರ್ ನ ವರ್ಟಿಕ ಉದ್ಯಮವಾದ ಆಸ್ಟರ್ ಹೋಂ ರೋಗಿಗಳಿಗೆ ನಿರಂತರ ಮೇಲ್ವಿಚಾರಣೆ ಮತ್ತು ತೀವ್ರ ನಿಗಾ ಸೌಲಭ್ಯಗಳನ್ನು ಒದಗಿಸಲು ಗೃಹ ತೀವ್ರ ನಿಗಾ ಘಟಕವನ್ನು ಪರಿಚಯಿಸಿದೆ. ಈ ಸೇವೆಗಳನ್ನು ತರಬೇತುಪಡೆದ ಮತ್ತು ಅನುಭವಿ ತೀವ್ರ ನಿಗಾ ಸಿಬ್ಬಂದಿಯು ನೀಡುತ್ತಾರೆ. ಆಸ್ಪತ್ರೆಯ ದಾಖಲಾತಿಗೆ ಹೋಲಿಸಿದರೆ ಈ ಸೇವೆಗಳು ಅಗ್ಗವಾಗಿದ್ದು, ಆಸ್ಪತ್ರೆಯಿಂದ ಹರಡುವ ಸೋಂಕುಗಳ ಪ್ರಮಾಣವನ್ನು ಕಡಿಮೆಮಾಡುತ್ತದೆ. ಗೃಹಾರೈಕೆ ಸೇವೆಗಳಿಂದಾಗಿ ರೋಗಿಗಳು ಆಸ್ಪತ್ರೆಗೆ ಹೋಗುವುದು ತಪ್ಪುತ್ತದೆ, ಮತ್ತು ಮನೆಯ ಅನುಕೂಲದಲ್ಲಿ ಚಿಕಿತ್ಸೆ ಪಡೆಯುವುದು ಸಾಧ್ಯವಾಗುತ್ತದೆ ಎಂದು ಸಿ ಇ ಒ ಡಾ ಹರೀಶ್ ಪಿಳ್ಳೈ ತಿಳಿಸಿದ್ದಾರೆ.