ಆಸ್ಕರ್ ರೇಸ್: ಕಾಂತಾರ, ವಿಕ್ರಾಂತ್ ರೋಣ ಸೇರಿ 11 ಭಾರತೀಯ ಚಿತ್ರಗಳ ಅರ್ಹತೆ

ಬೆಂಗಳೂರು/ ಮುಂಬೈ,ಜ.10-ಈ ಬಾರಿಯ ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿಗೆ ಕನ್ನಡದ ಕಾಂತಾರ, ವಿಕ್ರಾಂತ್ ರೋಣಾ ಅಲ್ಲದೆ 11 ಕ್ಕೂ ಹೆಚ್ಚು ಭಾರತೀಯ ಚಿತ್ರಗಳು ನಾಮ ನಿರ್ದೇಶನ ಸುತ್ತಿಗೆ ಅರ್ಹತೆ ಪಡೆದಿವೆ.

ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರ ಅತ್ಯುತ್ತಮ ನಿರ್ದೇಶಕ,ನಟ ಪ್ರಶಸ್ತಿಗೆ ಅರ್ಹತಾ ಸುತ್ತಿನಲ್ಲಿದ್ದರೆ ವಿಕ್ರಾಂತ್ ರೋಣ ತಾಂತ್ರಿಕ ವಿಭಾಗದಲ್ಲಿ ನಾಮ ನಿರ್ದೇಶನದಲ್ಲಿ ಅರ್ಹತೆ ಪಡೆದಿದೆ.

ಆಸ್ಕರ್ ಅರ್ಹತಾ ಪಟ್ಟಿಯಲ್ಲಿ ಭಾರತೀಯ ಚಲನಚಿತ್ರಗಳನ್ನು ಸೇರಿಸಲಾಗಿದೆ ಯಾವಾವು ಎನ್ನು ಕುರಿತು ಮಾಹಿತಿ ಇಲ್ಲಿದೆ.

ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ಭಾರತೀಯ ಚಲನಚಿತ್ರಗಳನ್ನು ಒಳಗೊಂಡಿರುವ ಆಸ್ಕರ್‌ಗೆ ಅರ್ಹವಾಗಿರುವ 301 ಚಲನಚಿತ್ರಗಳ ಪಟ್ಟಿ ಬಿಡುಗಡೆ ಮಾಡಿದೆ.

ತೆಲುಗಿನ ಆರ್ ಆರ್ ಆರ್, ಬಾಲಿವುಡ್ ನ ಗಂಗೂಬಾಯಿ ಕಥಿಯಾವಾಡಿ, ದಿ ಕಾಶ್ಮೀರ್ ಫೈಲ್ಸ್, ಕಾಂತಾರ, ಛೆಲೋ ಶೋ (ಕೊನೆಯ ಚಿತ್ರ ಪ್ರದರ್ಶನ), ರಾಕೆಟ್ರಿ: ದಿ ನಂಬಿ ಎಫೆಕ್ಟ್, ಇರಾವಿನ್ ನಿಜಾಲ್, ವಿಕ್ರಾಂತ್ ರೋನಾ, ಮೆ ವಸಂತರಾವ್ ಮತ್ತು ತುಜ್ಞಾ ಸತಿ ಕಹಿ ಹೈ ಪಟ್ಟಿಯಲ್ಲಿ ಭಾರತೀಯ ಚಲನಚಿತ್ರಗಳು ಸೇರಿವೆ.

ನಾಳೆಯಿಂದ ಇದೇ 17 ರವರೆಗೆ ನಾಮ ನಿರ್ದೇಶನಕ್ಕೆ ಅರ್ಹತೆ ಪಡೆದಿರುವ ಚಿತ್ರಗಳಿಗೆ ಆಸ್ಕರ್ ನಾಮ ನಿರ್ದೇಶನಕ್ಕೆ ಬಂದ ಚಿತ್ರಗಳಿಗೆ ಮತ ಚಲಾಯಿಸಲಿದ್ದಾರೆ.

ಹೆಚ್ಚು ಮತ ಪಡೆದ ಚಿತ್ರಗಳನ್ನು ಅಂತಿನ ನಾಮ ನಿರ್ದೇಶನಕ್ಕೆ ಆಯ್ಕೆ ಮಾಡಲಾಗುವುದು ಎಂದು ಆಸ್ಕರ್ ಪ್ರಶಸ್ತಿ ವಿಭಾಗದ ಮೂಲಗಳು ತಿಳಿಸಿವೆ.