ಆಸ್ಕರ್ ಪೂರ್ವ ಸಮಾರಂಭ: ಪಿಗ್ಗಿ ಭಾಗಿ

ಮುಂಬೈ, ಮಾ ೧೦: ಆಸ್ಕರ್ ಪೂರ್ವ ಸಮಾರಂಭದಲ್ಲಿ ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ನಿಕ್ ಜೋನಾಸ್ ಅವರೊಂದಿಗೆ ಭಾಗಿಯಾದ ಪೋಟೋಗಳು ವೈರಲ್ ಆಗಿದೆ.

ಪ್ರಿಯಾಂಕಾ ಚೋಪ್ರಾ ಬಿಳಿ ಉಡುಗೆಯಲ್ಲಿ ಪೂರ್ವ ಆಸ್ಕರ್ ಕಾರ್ಯಕ್ರಮದ ಭಾಗವಾಗಿದ್ದರು. ಆಸ್ಕರ್‌ಗೆ ಮುನ್ನ ನಡೆದ ಸೌತ್ ಏಷ್ಯನ್ ಎಕ್ಸಲೆನ್ಸ್ ಈವೆಂಟ್‌ಗಾಗಿ ಪ್ರಿಯಾಂಕಾ ಚೋಪ್ರಾ ತಮ್ಮ ನೋಟದ ಫೋಟೋಗಳ ಹಂಚಿಕೊಂಡಿದ್ದಾರೆ. ಅವರು ಗರಿಗಳಿರುವ ಬಿಳಿ ಉಡುಪನ್ನು ಧರಿಸಿದ್ದರು .

ಪ್ರಿಯಾಂಕಾ ಮತ್ತು ನಿಕ್ ಇತ್ತೀಚೆಗೆ ಪ್ಯಾರಿಸ್ ಫ್ಯಾಶನ್ ವೀಕ್‌ನಲ್ಲಿ ವ್ಯಾಲೆಂಟಿನೋ ಶೋನಲ್ಲೂ ಭಾಗವಹಿಸಿ ಗಮನ ಸೆಳೆದಿದ್ದರು.

ಈ ವರ್ಷದ ಆಸ್ಕರ್‌ನಲ್ಲಿ, ತೆಲುಗು ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಆಲ್ ದಟ್ ಬ್ರೀತ್ಸ್ ಮತ್ತು ಎಲಿಫೆಂಟ್ ವಿಸ್ಪರರ್ಸ್‌ಗಾಗಿ ಅತ್ಯುತ್ತಮ ಸಾಕ್ಷ್ಯಚಿತ್ರ ಮತ್ತು ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರಕ್ಕಾಗಿ ನಾಮನಿರ್ದೇಶನಗಳು ಸಹ ಇವೆ. ಸಮಾರಂಭದಲ್ಲಿ ನಿರೂಪಕರಲ್ಲಿ ಒಬ್ಬರಾಗಿ ದೀಪಿಕಾ ಪಡುಕೋಣೆ ಅವರು ಇರಲಿದ್ದಾರೆ.